ಭಾನುವಾರ, ಜುಲೈ 3, 2022
24 °C

Fact Check: ಎಂ.ಕೆ. ಸ್ಟಾಲಿನ್ ಅಳಿಯನ ಮನೆಯಲ್ಲಿ ಕಂತೆ ಕಂತೆ ನೋಟು, ಚಿನ್ನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರ ಅಳಿಯ ಶಬರೀಶನ್ ಅವರ ಮನೆ ಹಾಗೂ ಕಚೇರಿಗಳಲ್ಲಿ ಏಪ್ರಿಲ್ 2ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದರು. ತಪಾಸಣೆ ವೇಳೆ ₹700 ಕೋಟಿ ನಗದು, 260 ಕೆ.ಜಿ ಚಿನ್ನ, ₹3,000 ಕೋಟಿ ಮೊತ್ತದ ದಾಖಲೆರಹಿತ ಆಸ್ತಿಪಾಸ್ತಿ ಸಿಕ್ಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಕಂತೆಕಂತೆ ನೋಟು, ಚಿನ್ನದ ಬಿಸ್ಕೀಟ್‌ ಇರುವ ಚಿತ್ರಗಳು ವೈರಲ್ ಆಗಿದ್ದವು.

ಸ್ಟಾಲಿನ್ ಅಳಿಯನ ಮನೆಯಲ್ಲಿ ಸಿಕ್ಕಿವೆ ಎನ್ನಲಾದ ಚಿನ್ನ ಹಾಗೂ ಗರಿಗರಿ ನೋಟಿನ ಚಿತ್ರಗಳು ಈ ಬಾರಿಯ ಆದಾಯ ತೆರಿಗೆ ಅಧಿಕಾರಿಗಳ ಶೋಧದಲ್ಲಿ ಸಿಕ್ಕಿದವಲ್ಲ ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ. ಶಬರೀಶನ್ ಮನೆಯಲ್ಲಿ ಸಿಕ್ಕಿದ್ದು ₹1.34 ಲಕ್ಷ ನಗದು ಮಾತ್ರ. ಈ ಹಣವನ್ನು ದಾಖಲೆಗಳನ್ನು ಒದಗಿಸಿದ ಬಳಿಕ ಕುಟುಂಬಕ್ಕೆ ಅಧಿಕಾರಿಗಳು ಹಸ್ತಾಂತರಿಸಿದ್ದಾರೆ ಎಂದು ಎನ್‌.ಡಿ.ಟಿ.ವಿ ಹಾಗೂ ಸನ್‌ ನ್ಯೂಸ್ ವರದಿ ಮಾಡಿವೆ. ವೈರಲ್ ಆಗಿರುವ ಚಿತ್ರವು, 2019ರಲ್ಲಿ ತೆಲಂಗಾಣದ ಖಮ್ಮಂನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ನಕಲಿ ನೋಟುಗಳ ಚಿತ್ರ ಎಂದು ಸ್ಪಷ್ಟಪಡಿಸಿದೆ. ಚಿನ್ನದ ಬಿಸ್ಕೀಟ್ ಇರುವ ಚಿತ್ರವು 2018ರಲ್ಲಿ ವೆಲ್ಲೂರಿನ ಎಸ್‌ಪಿಕೆ ಕಂಪನಿಯ ಕಚೇರಿಯಲ್ಲಿ ಐಟಿ ಅಧಿಕಾರಿಗಳು ನಡೆಸಿದ ತಪಾಸಣೆಗೆ ಸಂಬಂಧಿಸಿದೆ ಎಂದು ವರದಿ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು