ಶನಿವಾರ, ಮೇ 21, 2022
23 °C

ಫ್ಯಾಕ್ಟ್ ಚೆಕ್: ಪ್ರತಿಭಟನಾನಿರತರಿಗೆ ಮದ್ಯ ಪೂರೈಕೆ ಎಂಬುದು ಸುಳ್ಳು ಸುದ್ದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಂತಿರುವ ವಾಹನದಲ್ಲಿ ಬಟ್ಟಲು, ಲೋಟ ಹಿಡಿದು ಮುಗಿಬಿದ್ದಿರುವ ಜನ. ಬಾಟಲಿಯಿಂದ ತಮ್ಮ ಬಟ್ಟಲಿಗೆ ಒಂದಿಷ್ಟು ಮದ್ಯ ಹಾಕಿಸಿಕೊಳ್ಳುವ ತವಕ. ವಾಹನದತ್ತ ಓಡಿಬರುತ್ತಿರುವ ಜನ – ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಜನರು ಮುಗಿಬಿದ್ದು ಮದ್ಯಕ್ಕೆ ಹಾತೊರೆಯುತ್ತಿದ್ದಾರೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಎಂತೆಂಥಾ ಸೌಲಭ್ಯಗಳಿವೆ ನೋಡಿ ಎಂದು ಒಕ್ಕಣೆ ಕೂಡಾ ನೀಡಲಾಗಿದೆ.

ಜನರು ಮದ್ಯಕ್ಕೆ ಮುಗಿಬಿದ್ದಿರುವ ವಿಡಿಯೊವನ್ನು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ತಂಡ ಪರಿಶೀಲನೆಗೆ ನಡೆಸಿದೆ. ರಿವರ್ಸ್ ಇಮೇಜ್‌ನಲ್ಲಿ ಹಾಕಿದಾಗ, ಈ ವಿಡಿಯೊ ಕಳೆದ ವರ್ಷದ ಏಪ್ರಿಲ್‌ನಲ್ಲಿ ಚಿತ್ರೀಕರಿಸಿದ್ದು ಎಂಬುದು ದೃಢಪಟ್ಟಿದೆ. ಫೇಸ್‌ಬುಕ್ ಹಾಗೂ ಯೂಟ್ಯೂಬ್‌ನಲ್ಲಿ ಏಪ್ರಿಲ್‌ನಲ್ಲಿ ಇದು ಅಪ್ಲೋಡ್ ಆಗಿದೆ. ಕೃಷಿ ಕಾನೂನುಗಳಿಗೆ ಅನುಮೋದನೆ, ರೈತರ ಪ್ರತಿಭಟನೆಗಳೆಲ್ಲ ಶುರುವಾಗಿದ್ದು ಸೆಪ್ಟೆಂಬರ್‌ನಲ್ಲಿ. ಈ ವಿಡಿಯೊಗೂ ರೈತರ ಪ್ರತಿಭಟನೆಗೂ ಸಂಬಂಧವಿಲ್ಲ ಎಂದು ವೆಬ್‌ಸೈಟ್ ಸ್ಟಷ್ಟಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು