ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಗಾಳಿಯಲ್ಲಿ ಹಾರಾಡಲು ಯೋಗ ಕಾರಣವಂತೆ!

Last Updated 23 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಯಾವ ಆಧಾರವೂ ಇಲ್ಲದೆ, ವ್ಯಕ್ತಿಯೊಬ್ಬರು ಗಾಳಿಯಲ್ಲಿ ತೇಲುತ್ತಿರುವ ವಿಡಿಯೊವೊಂದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಯೋಗ ಶಕ್ತಿಯಿಂದ ಇದು ಸಾಧ್ಯವಾಗಿದೆ ಎಂದು ಚರ್ಚಿಸಲಾಗುತ್ತಿದೆ. ಹೈದರಾಬಾದ್‌ನ ವ್ಯಕ್ತಿಯೊಬ್ಬರು ಯೋಗದಿಂದ ಸಿದ್ಧಿಸಿಕೊಂಡ ಶಕ್ತಿಯಿಂದ ಆಗಸದಲ್ಲಿ ಹಕ್ಕಿಯಂತೆ ಹಾರಾಡಲು ಸಾಧ್ಯವಾಗಿದೆ ಎಂದು ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ಉಲ್ಲೇಖಿಸಲಾಗಿದೆ. ವಿಜ್ಞಾನಿಗಳೂ ಇದನ್ನು ಕಂಡು ಚಕಿತರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಹೇಳಿಕೊಂಡಿದ್ದಾರೆ. ಆದರೆ, ಇದು ತಪ್ಪು ಮಾಹಿತಿ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೊದಲ್ಲಿ ಕಾಣಿಸಿಕೊಂಡಿರುವವರು ಹೈದರಾಬಾದ್‌ನ ವಿಘ್ನೇಶ್ ಪ್ರಭು. ಇವರು ವೃತ್ತಿಯಲ್ಲಿ ಅಂತರರಾಷ್ಟ್ರೀಯ ಜಾದೂಗಾರ. ಗಾಳಿಯಲ್ಲಿ ತೇಲುವ ಜಾದೂ ಪ್ರದರ್ಶಿಸಿರುವ ಅವರು, ವಿಡಿಯೊವನ್ನು ತಮ್ಮ ಯೂಟ್ಯೂಬ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಈಗ ಜಾದೂ ಪ್ರದರ್ಶಿಸುತ್ತೇನೆ’ ಎಂದು ಸ್ವತಃ ಅವರೇ ವಿಡಿಯೊದಲ್ಲಿ ಹೇಳಿದ್ದಾರೆ. ಗಾಳಿಯಲ್ಲಿ ಯಾವುದೇ ಆಧಾರ ಇಲ್ಲದೆ ತೇಲುವಂತಹ ಜಾದೂ ರಹಸ್ಯಗಳನ್ನು ವಿವರಿಸುವ ಹಲವಾರು ಯೂಟ್ಯೂಬ್‌ ವಿಡಿಯೊಗಳು ಲಭ್ಯವಿವೆ. ಕ್ರೇನ್ ಬಳಸಿ ತಂತ್ರಗಾರಿಕೆ ಪ್ರದರ್ಶಿಸಿರುವ ವಿಡಿಯೊಗಳೂ ಇವೆ ಎಂದು ‘ನ್ಯೂಸ್‌ಮೀಟರ್’ ತಾಣ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT