ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್ ಚೆಕ್: ಮಾರುಕಟ್ಟೆಯಲ್ಲಿ ಅಫ್ಗನ್ ಮಹಿಳೆಯರ ಮಾರಾಟ?

Last Updated 22 ಆಗಸ್ಟ್ 2021, 21:30 IST
ಅಕ್ಷರ ಗಾತ್ರ

ತಾಲಿಬಾನ್ ಆಧಿಪತ್ಯದಲ್ಲಿರುವ ಅಫ್ಗಾನಿಸ್ತಾನದಲ್ಲಿ ನಾಗರಿಕರ ಸ್ಥಿತಿ ಶೋಚನೀಯವಾಗಿದೆ ಎಂಬ ವರದಿಗಳು ಬರುತ್ತಿವೆ. ಮಹಿಳೆಯರನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಬಿಂಬಿಸುವ ಚಿತ್ರವೊಂದು ವೈರಲ್ ಆಗಿದೆ. ಬುರ್ಖಾ ಧರಿಸಿರುವ ಇಬ್ಬರು ಮಹಿಳೆಯರ ಕೈಗೆ ಸರಪಳಿ ಬಿಗಿಯಲಾಗಿದ್ದು,‌ ಯುವಕನೊಬ್ಬ ಹರಾಜು ಕೂಗುತ್ತಿರುವ ದೃಶ್ಯ ಈ ಚಿತ್ರದಲ್ಲಿದೆ. ನೂರಾರು ಜನರು ಈ ಚಿತ್ರವನ್ನು ಹಂಚಿಕೊಂಡಿದ್ದು, ಅಫ್ಗನ್ ಮಹಿಳೆಯರ ಸ್ಥಿತಿ ಹೀಗಿದೆ ನೋಡಿ ಎಂದು ಉಲ್ಲೇಖಿಸಿದ್ದಾರೆ.

ವೈರಲ್ ಆಗಿರುವ ಚಿತ್ರವು ಬೀದಿನಾಟಕವೊಂದರ ದೃಶ್ಯ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ‘ಐಸಿಸ್ ಲೈಂಗಿಕ ಜೀತದಾಳುಗಳ ಮಾರುಕಟ್ಟೆ’ ಎಂಬ ಹೆಸರಿನ ಬೀದಿನಾಟಕವನ್ನು 2014ರಲ್ಲಿ ಲಂಡನ್‌ನಲ್ಲಿ ಪ್ರದರ್ಶಿಸಲಾಗಿತ್ತು. ‘ಕಂಪ್ಯಾಷನ್ 4 ಕುರ್ದಿಸ್ತಾನ್’ ಎಂಬ ಗುಂಪು ಇದನ್ನು ಪ್ರಸ್ತುತಪಡಿಸಿತ್ತು. ಐಸಿಸ್‌ನ ಕ್ರೌರ್ಯವನ್ನು ಜಗತ್ತಿಗೆ ತಿಳಿಸಲು ಇದನ್ನು ರೂಪಿಸಲಾಗಿತ್ತು. ಆದಾಗ್ಯೂ ಅಫ್ಗನ್‌ನಲ್ಲಿ ಮಹಿಳೆಯರು ಭೀತಿಯಲ್ಲೇ ಇದ್ದಾರೆ. ಆದರೆ ಈ ಚಿತ್ರ ಅಫ್ಗನ್‌ಗೆ ಸಂಬಂಧಪಟ್ಟಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT