ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಹಿಂಸಾಚಾರದಲ್ಲಿ ಗ್ರಂಥ ಸುಟ್ಟಿದ್ದು ನಿಜವೇ?

Last Updated 31 ಅಕ್ಟೋಬರ್ 2021, 21:45 IST
ಅಕ್ಷರ ಗಾತ್ರ

ಕೆಲವು ದಿನಗಳಿಂದ ಕೋಮು ಘರ್ಷಣೆಗಳಿಗೆ ತ್ರಿಪುರಾ ಸಾಕ್ಷಿಯಾಗುತ್ತಿದೆ. ಹಲವು ಕಡೆ ನಿಷೇಧಾಜ್ಞೆ ಹೇರಲಾಗಿದೆ. ಈ ಮಧ್ಯೆ ಮಸೀದಿಯೊಂದನ್ನು ಸುಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸುಟ್ಟು ಕರಕಲಾಗಿರುವ ಧಾರ್ಮಿಕ ಪುಸ್ತಕಗಳನ್ನು ಹಿಡಿದಿರುವ ಇಬ್ಬರು ಯುವಕರ ಚಿತ್ರ ವೈರಲ್ ಆಗಿದೆ. ಹಿಂಸಾಚಾರದಲ್ಲಿ ಧಾರ್ಮಿಕ ಗ್ರಂಥಗಳನ್ನು ಸುಡಲಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದಾರೆ.

ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ಹಾಗೂ ಆಲ್ಟ್ ನ್ಯೂಸ್‌, ವೈರಲ್ ಫೊಟೊ ಬಗ್ಗೆ ಪರಿಶೀಲನೆ ನಡೆಸಿವೆ. ಈ ಚಿತ್ರವು ತ್ರಿಪುರಾದ್ದಲ್ಲ ಎಂದು ಖಚಿತಪಡಿಸಿವೆ. ಇತ್ತೀಚೆಗೆ ದೆಹಲಿಯ ರೋಹಿಂಗ್ಯಾ ನಿರಾಶ್ರಿತರ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಪುಸ್ತಕಗಳು ಬೆಂಕಿಗಾಹುತಿಯಾಗಿವೆ. ತ್ರಿಪುರಾ ಹಿಂಸಾಚಾರಕ್ಕೂ, ಧಾರ್ಮಿಕ ಗ್ರಂಥಗಳು ಸುಟ್ಟಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವೆಬ್‌ಸೈಟ್‌ಗಳು ಅಭಿಪ್ರಾಯಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT