ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್ ಚೆಕ್: ಕಾಂಗ್ರೆಸ್ ಸಭೆಯ ಹಿಂಬದಿಯ ಬ್ಯಾನರ್‌ ಬರಹದಲ್ಲೇನಿದೆ?

Last Updated 23 ಆಗಸ್ಟ್ 2021, 20:56 IST
ಅಕ್ಷರ ಗಾತ್ರ

ಕಾಂಗ್ರೆಸ್‌ನ ಪ್ರಮುಖ ನಾಯಕರು ಸಭೆ ನಡೆಸುತ್ತಿರುವ ಚಿತ್ರವೊಂದರಲ್ಲಿ ಹಿಂಬದಿಯ ಬ್ಯಾನರ್‌ನ ಬರಹ ಸುದ್ದಿಯಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಾ. ಮನಮೋಹನ್ ಸಿಂಗ್ ಮೊದಲಾದವರು ಚಿತ್ರದಲ್ಲಿದ್ದಾರೆ. ಬ್ಯಾನರ್‌ನಲ್ಲಿ ‘ಚೋರ್ (ಕಳ್ಳ) ಗ್ರೂಪ್ ಮೀಟಿಂಗ್’ ಎಂದು ಬರೆಯಲಾಗಿದೆ. ಉತ್ತರ ಪ್ರದೇಶ ಭಾರತೀಯ ಜನತಾ ಯುವ ಮೋರ್ಚಾ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಡಾ. ರಿಚಾ ರಜಪೂತ್ ಅವರು ಚಿತ್ರವನ್ನು ಷೇರ್ ಮಾಡಿದ್ದು, ‘ಕಣ್ತಿಪ್ಪಿನಿಂದ ಆಗಿದ್ದರೂ, ಸರಿಯಾದ ಅರ್ಥವನ್ನೇ ನೀಡುತ್ತಿದೆ’ ಎಂದು ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದ್ದಾರೆ.

ಈ ಚಿತ್ರವನ್ನು ತಿರುಚಲಾಗಿದೆ ಎಂದು ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ತಿಳಿಸಿದೆ. 2019ರಲ್ಲಿ ನಡೆದ ಕಾಂಗ್ರೆಸ್ ಕೋರ್ ಕಮಿಟಿ ಸಭೆ (ಸಿಡಬ್ಲ್ಯೂಸಿ) ಇದಾಗಿದ್ದು, ಕೋರ್ ಎಂಬ ಪದವನ್ನು ಚೋರ್ ಎಂಬುದಾಗಿ ವಿಡಂಬನೆ ಮಾಡಲಾಗಿದೆ. ಮೂಲ ಚಿತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದಷ್ಟೇ ಬರೆಯಲಾಗಿತ್ತು. ಅಂದು ಸುದ್ದಿ ಪ್ರಕಟಿಸಿದ್ದ ಎಲ್ಲ ವೆಬ್‌ಸೈಟ್‌ಗಳಲ್ಲೂ ಇದು ಸ್ಪಷ್ಟವಾಗಿದೆ. ಚೋರ್ ಗ್ರೂಪ್ ಮೀಟಿಂಗ್ ಎಂಬುದನ್ನು ಹೊಸದಾಗಿ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT