ಮಂಗಳವಾರ, ಆಗಸ್ಟ್ 9, 2022
23 °C

FACT CHECK: ಕಾಶ್ಮೀರದ ಜನರಿಗೆ ಉಚಿತ ವಿದ್ಯುತ್‌?: ಭಾರಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘70 ವರ್ಷಗಳಿಂದ ಈವರೆಗೆ ಜಮ್ಮು ಕಾಶ್ಮೀರದ ಜನರು ಅನುಭವಿಸುತ್ತಿದ್ದ ಉಚಿತ ವಿದ್ಯುತ್ ಕೊಡುಗೆ ಕೊನೆಯಾಗಲಿದೆ. ಕಣಿವೆಯ ಜನರು ತಾವು ಬಳಸುವ ವಿದ್ಯುತ್‌ಗೆ ಇನ್ನುಮುಂದೆ ಹಣ ಪಾವತಿಸಬೇಕಿದೆ’ ಎಂದು ಹೇಳುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿವೆ. ಮುಸ್ಲಿಮರನ್ನು ಗುರಿಯಾಗಿಸಿ ಕೆಲವು ಪೋಸ್ಟ್‌ ಹಾಕಲಾಗಿದೆ. ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಅವರು ‘ಇನ್ನು ಮುಂದೆ ಉಚಿತ ವಿದ್ಯುತ್ ನೀಡುವುದಿಲ್ಲ’ ಎಂದು ಹೇಳಿದ್ದಾರೆ ಎನ್ನಲಾದ ವರದಿಗಳಿದ್ದು, ಕಾಶ್ಮೀರದ ಕೆಲವು ಭಾಗಗಳಲ್ಲಿ ವಿದ್ಯುತ್ ಮೀಟರ್‌ಗಳನ್ನು ಜನರು ಒಡೆದುಹಾಕುತ್ತಿರುವ ವಿಡಿಯೊಗಳು ವೈರಲ್ ಆಗಿವೆ. 

 ಜಮ್ಮು ಕಾಶ್ಮೀರದ ಜನರಿಗೆ ಈವರೆಗೆ ಉಚಿತ ವಿದ್ಯುತ್ ನೀಡಲಾಗಿತ್ತು ಎಂಬ ವಾದ ಸತ್ಯಕ್ಕೆ ದೂರವಾದುದು ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್ ವೇದಿಕೆ ತಿಳಿಸಿದೆ. 1971ರ ಜಮ್ಮು ಕಾಶ್ಮೀರ ವಿದ್ಯುತ್ ಕಾಯ್ದೆಯ ಪ್ರಕಾರ, ಜನರು ವಿದ್ಯುತ್ ಶುಲ್ಕ ಪಾವತಿಸುತ್ತಿದ್ದಾರೆ. ಸಿನ್ಹಾ ಅವರು ತಮ್ಮ ಭಾಷಣದಲ್ಲಿ ಉಚಿತ ವಿದ್ಯುತ್ ಬಗ್ಗೆ ಪ್ರಸ್ತಾಪಿಸಿಲ್ಲ. ಆದರೆ ಮಾಧ್ಯಮಗಳು ಅವರ ಮಾತುಗಳನ್ನು ತಪ್ಪಾಗಿ ವರದಿ ಮಾಡಿವೆ. ವಿದ್ಯುತ್ ದರ ಏರಿಕೆ ಖಂಡಿಸಿ ಜನರು ಮೀಟರ್‌ಗಳನ್ನು ಒಡೆದು ಹಾಕಿದ್ದಾರೆಯೇ ವಿನಾ, ಉಚಿತ ವಿದ್ಯುತ್ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅಲ್ಲ ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು