ಫ್ಯಾಕ್ಟ್ ಚೆಕ್: ರಕ್ತದ ಕಲೆಯ ವಸ್ತ್ರ ಕಟ್ಟಿಕೊಂಡು ಪೊಲೀಸರ ನಾಟಕ?

ಕಳೆದ ವಾರ, ಈದ್ ಹಬ್ಬಕ್ಕೂ ಮುನ್ನ ರಾಜಸ್ಥಾನದ ಜೋಧಪುರದ ಹಲವು ಸ್ಥಳಗಳಲ್ಲಿ ಹಿಂಸಾಚಾರ, ಕಲ್ಲೂತೂರಾಟ ನಡೆದಿತ್ತು. ಪೊಲೀಸ್ ಸಿಬ್ಬಂದಿಯೊಬ್ಬರು ರಕ್ತಸಿಕ್ತವಾದ ವಸ್ತ್ರವನ್ನು ತಮ್ಮ ಹಣೆಗೆ ಕಟ್ಟಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ‘ಗಲಭೆಯಲ್ಲಿ ಗಾಯವಾಗಿದೆ ಎಂದು ಸುಳ್ಳು ಹೇಳುತ್ತಿರುವ ಈ ಪೊಲೀಸ್ ಸಿಬ್ಬಂದಿ, ರಕ್ತದ ಕಲೆಗಳಿರುವ ಬಟ್ಟೆಯನ್ನು ತಾವೇ ತಮ್ಮ ಹಣೆಗೆ ಕಟ್ಟಿಕೊಂಡು ನಾಟಕವಾಡುತ್ತಿದ್ದಾರೆ’ ಎಂಬುದಾಗಿ ಹಲವರು ಆರೋಪಿಸಿದ್ದರು. ಪತ್ರಿಕೆಗಳಲ್ಲೂ ಇದೇ ಧಾಟಿಯ ವರದಿ ಪ್ರಕಟವಾಗಿತ್ತು.
ಪತ್ರಿಕಾ ವರದಿಗಳು ಹಾಗೂ ವಿಡಿಯೊದಲ್ಲಿ ತಪ್ಪು ಅರ್ಥ ಬರುವಂತೆ ಬಿಂಬಿಸಲಾಗಿದೆ ಎಂದು ಜೋಧಪುರ ಪೊಲೀಸರು ಟ್ವೀಟ್ ಮಾಡಿ ತಿಳಿಸಿದ್ದಾರೆ. ‘ಪೊಲೀಸ್ ಸಿಬ್ಬಂದಿ ಧನ್ನಾರಾಮ್ ಅವರು ಕಲ್ಲೇಟಿನಿಂದ ಹಣೆಗೆ ಆಗಿದ್ದ ಗಾಯವನ್ನು ತಮ್ಮ ಬಳಿಯಿದ್ದ ವಸ್ತ್ರದಿಂದ ಒರೆಸಿಕೊಂಡಿದ್ದರು. ಬಳಿಕ, ರಕ್ತ ಹರಿಯದಂತೆ ತಡೆಯಲು ರಕ್ತದ ಕಲೆಯಿದ್ದ ಅದೇ ವಸ್ತ್ರವನ್ನು ಹಣೆಗೆ ಕಟ್ಟಿಕೊಂಡಿದ್ದರು’ ಎಂದು ಟ್ವೀಟ್ ಉಲ್ಲೇಖಿಸಿದೆ. ಹಣೆಗೆ ಗಾಯವಾಗಿರುವ ಚಿತ್ರವನ್ನು ಟ್ವಿಟರ್ನಲ್ಲಿ ಪ್ರಕಟಿಸಲಾಗಿದೆ ಎಂದು ಲಾಜಿಕಲ್ ಇಂಡಿಯನ್ ತಾಣ ವರದಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.