ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

fact check: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡೋಂಗಿ ಹಿಂದೂ?

Last Updated 7 ಡಿಸೆಂಬರ್ 2022, 19:04 IST
ಅಕ್ಷರ ಗಾತ್ರ

ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ‘ಡೋಂಗಿ ಹಿಂದೂ’ ಎಂದು ಕರೆದಿದ್ದಾರೆ ಎನ್ನಲಾದ ವಿಡಿಯೊ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಭಾರತ್ ಜೋಡೋ’ ಯಾತ್ರೆಯ ಭಾಗವಾಗಿ ಮಧ್ಯಪ್ರದೇಶದ ಉಜ್ಜೈನಿಗೆ ಭೇಟಿ ನೀಡಿದ್ದ ರಾಹುಲ್, ಮಹಾಕಾಳ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ‘ಸುಪ್ರಿಯಾ ಅವರು ಈಗಲಾದರೂ ಧೈರ್ಯದಿಂದ ತಮ್ಮ ನಾಯಕರ ಬಗ್ಗೆ ಮಾತನಾಡಿದ್ದಾರೆ’ ಎಂದು ಜಾಲತಾಣ ಬಳಕೆದಾರರು ಪ್ರಶಂಸಿಸಿದ್ದಾರೆ.ಆದರೆ ಈ ವಿಡಿಯೊವನ್ನು ತಿರುಚಲಾಗಿದೆ.

ಸುಪ್ರಿಯಾ ಅವರು ‘ಡೋಂಗಿ ಹಿಂದೂ’ ಎಂದು ಕರೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೊರತು ರಾಹುಲ್ ಗಾಂಧಿ ಅವರನ್ನು ಅಲ್ಲ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ. ಸುಪ್ರಿಯಾ ಅವರು ‘ಆಜ್‌ತಕ್’ ಟಿ.ವಿ ಸುದ್ದಿವಾಹಿನಿಯ ಚರ್ಚೆಯಲ್ಲಿ ಭಾಗಿಯಾಗಿದ್ದಾಗ ಈ ಕುರಿತು ಮಾತನಾಡಿದ್ದರು. ಚರ್ಚೆಯ ವಿಡಿಯೊದಲ್ಲಿ ರಾಹುಲ್ ಉಲ್ಲೇಖವಿಲ್ಲ. ಮೋದಿ ಅವರು ಇತ್ತೀಚೆಗೆ ದೇವಸ್ಥಾನಕ್ಕೆ ಹೋಗಿದ್ದ ವಿಚಾರವಾಗಿ ನಡೆಯುತ್ತಿದ್ದ ಚರ್ಚೆಯಲ್ಲಿ ಭಾಗಿಯಾಗಿದ್ದ ಸುಪ್ರಿಯಾ, ‘ಲೆದರ್‌ಶೂ ಧರಿಸಿ ಪ್ರದಕ್ಷಿಣೆ ಹಾಕುವ ಅವರು ನಮಗೆ ಹಿಂದೂ ಧರ್ಮದ ಪಾಠ ಮಾಡುತ್ತಾರೆ. ಬೆಲೆ ಏರಿಕೆ, ನಿರುದ್ಯೋಗ ವಿಚಾರಗಳನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ’ ಎಂದು ಹೇಳಿದ್ದ ಮಾತುಗಳು ಮೂಲ ವಿಡಿಯೊದಲ್ಲಿವೆ. ವಿಡಿಯೊದಲ್ಲಿ ‘ಮೋದಿ’ ಹೆಸರನ್ನು ಅವರು ಉಲ್ಲೇಖಿಸಿದ್ದಾರೆ. ಆದರೆ ಮೋದಿ ಹೆಸರನ್ನು ಕತ್ತರಿಸಿ, ರಾಹುಲ್ ಗಾಂಧಿ ಅವರ ವಿಡಿಯೊ ಜೊತೆ ಜೋಡಿಸಿ ವಿಡಿಯೊವನ್ನು ಮರುಸೃಷ್ಟಿಸಲಾಗಿದೆ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT