ರಣ್‌ವೀರ್- ದೀಪಿಕಾ ಬಿಜೆಪಿ ಪರ ಪ್ರಚಾರ ಮಾಡಿಲ್ಲ: ಇದು ಫೋಟೊಶಾಪ್ ಕೈಚಳಕ!

ಶನಿವಾರ, ಏಪ್ರಿಲ್ 20, 2019
31 °C

ರಣ್‌ವೀರ್- ದೀಪಿಕಾ ಬಿಜೆಪಿ ಪರ ಪ್ರಚಾರ ಮಾಡಿಲ್ಲ: ಇದು ಫೋಟೊಶಾಪ್ ಕೈಚಳಕ!

Published:
Updated:

ಮುಂಬೈ: ಬಾಲಿವುಡ್ ದಂಪತಿ ರಣ್‌ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದಾರೆ ಎಂಬ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ಜೋಡಿ ಕೇಸರಿ ಶಾಲು ಧರಿಸಿರುವ ಫೋಟೊ ಇದಾಗಿದ್ದು, ಶಾಲು ಮೇಲೆ ಬಿಜೆಪಿಗೆ ಮತ ನೀಡಿ ಎಂದು ಬರೆದಿದೆ.

Ek Bihari 100 Pe Bhari ಎಂಬ ಫೇಸ್‍ಬುಕ್ ಪುಟದಲ್ಲಿ ಈ ಚಿತ್ರ ಶೇರ್ ಆಗಿದ್ದು, ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ದೇಶದ ಅಭಿವೃದ್ದಿಯ ಪಾಲುದಾರರಾಗಿ ಎಂದಿದೆ. ಕೆಲವು ನೆಟಿಜನ್‍ಗಳೂ ಇದೇ ಚಿತ್ರವನ್ನು ಶೇರ್ ಮಾಡಿದ್ದಾರೆ. 

ಆದರೆ ದೀಪಿಕಾ ಮತ್ತು ರಣ್‌ವೀರ್ ಯಾವುದೇ ಪಕ್ಷದ ಪರ ಚುನಾವಣಾ ಪ್ರಚಾರ ಮಾಡಿಲ್ಲ. ಇವರು ಬಿಜೆಪಿ ಪರ ಪ್ರಚಾರ ಮಾಡಿದ್ದಾರೆ ಎಂದು  ಬಿಂಬಿಸುತ್ತಿರುವ ಈ ಫೋಟೊ ಫೋಟೊಶಾಪ್ ಮಾಡಿದ್ದು ಎಂದು ಆಲ್ಟ್ ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿದೆ.

ಫ್ಯಾಕ್ಟ್‌ಚೆಕ್ 
ಇದೇ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಚ್ ಸರ್ಚ್ ಮಾಡಿದಾಗ ನಿಜವಾದ ಫೋಟೊ ಸಿಕ್ಕಿದೆ.

ಈ ಫೋಟೊ ನವೆಂಬರ್ 3- 2018ರಲ್ಲಿ ಕ್ಲಿಕ್ಕಿಸಿದ್ದು. ರಣ್‍ವೀರ್ ಮತ್ತು ದೀಪಿಕಾ ಮುಂಬೈಯ ಪ್ರಸಿದ್ದ ದೇವಾಲಯ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದಾಗ ಕ್ಲಿಕ್ಕಿಸಿದ  ಫೋಟೊ ಇದು. ಈ ಚಿತ್ರವನ್ನು ಹಲವಾರು ಸುದ್ದಿಗಳಲ್ಲಿಯೂ ಬಳಸಲಾಗಿದೆ. ಇದರಲ್ಲಿ  ಇವರಿಬ್ಬರು ಕೇಸರಿ ಶಾಲು ಧರಿಸಿದ್ದಾರೆಯೇ ಹೊರತು ಬಿಜೆಪಿ ಶಾಲು ಅಲ್ಲ.

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !