ಬುಧವಾರ, ಆಗಸ್ಟ್ 10, 2022
23 °C

‌Fact Check: ರೋಹಿಂಗ್ಯಾ ಜನರ ಕಟ್ಟಡಗಳು ನೆಲಸಮ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮ್ಮು ಮತ್ತು ಕಾಶ್ಮೀರದ ಆಡಳಿತವು ದಾಲ್ ಸರೋವರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದೆ. ರೋಹಿಂಗ್ಯಾ ಜಿಹಾದಿಗಳು ಅಕ್ರಮವಾಗಿ ಕಟ್ಟಿಕೊಂಡಿದ್ದ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ ಎಂಬ ಮಾಹಿತಿಯುಳ್ಳ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಕ್ರಮ ಕಟ್ಟಡ ನೆಲಸಮ ಮಾಡುತ್ತಿರುವ ದೃಶ್ಯಗಳನ್ನು ಹಲವು ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ. ಕಟ್ಟಡ ಧ್ವಂಸ ಮಾಡದಂತೆ ಸ್ಥಳೀಯರು ಮನವಿ ಮಾಡುತ್ತಿರುವ ಚಿತ್ರಣ ಇಲ್ಲಿದೆ.

ಜೂನ್ 5ರಂದು ವಿಡಿಯೊ ಅಪ್‌ಲೋಡ್ ಮಾಡಿರುವ ಜಮ್ಮು ಲಿಂಕ್ಸ್ ನ್ಯೂಸ್ ಯೂಟ್ಯೂಬ್ ಚಾನೆಲ್‌ನ ವರದಿ ಪ್ರಕಾರ, ದಾಲ್ ಸರೋವರ ಸಂರಕ್ಷಣಾ ಪ್ರಾಧಿಕಾರವು ಅಕ್ರಮ ಕಟ್ಟಡ ನೆಲಸಮ ಕಾರ್ಯ ನಡೆಸಿತು. ಕಾಶ್ಮೀರಿ ಅಬ್ಸರ್ವರ್ಸ್, ಕಾಶ್ಮೀರ್‌ಡಾಟ್‌ಕಾಮ್ ವಾಹಿನಿಗಳೂ ತೆರವು ಕಾರ್ಯಾಚರಣೆ ಮಾಹಿತಿ ನೀಡಿವೆ. ಆದರೆ ಎಲ್ಲಿಯೂ ರೋಹಿಂಗ್ಯಾ ಜಿಹಾದಿಗಳಿಗೆ ಸೇರಿದ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ಉಲ್ಲೇಖಿಸಿಲ್ಲ. ರೋಹಿಂಗ್ಯಾ ಜನರ ಕಟ್ಟಡ ತೆರವು ಮಾಡಲಾಗಿದೆ ಎಂಬ ಆರೋಪವನ್ನು ತೆರವು ಕಾರ್ಯಾಚರಣೆ ಅಧಿಕಾರಿ ಅಬ್ದುಲ್ ಅಜೀಜ್ ತಿರಸ್ಕರಿಸಿದ್ದಾರೆ ಎಂದು ಲಾಜಿಕಲ್ ಇಂಡಿಯನ್‌ ವೆಬ್‌ಸೈಟ್ ವರದಿ ಮಾಡಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು