ಸೋಮವಾರ, ಸೆಪ್ಟೆಂಬರ್ 20, 2021
28 °C

Fact Check: ವೈರಲ್‌ ಆದ ಪೋಸ್ಟರ್‌ನ ಹಿನ್ನೆಲೆ ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಸಮುದಾಯಗಳ ಓಲೈಕೆ ಶುರುವಾಗಿದೆ. ಬಿಎಸ್‌ಪಿಯು ಇತ್ತೀಚೆಗೆ ಬ್ರಾಹ್ಮಣರ ಸಮ್ಮೇಳನ ನಡೆಸಿತ್ತು. ಈ ಸಮಯದಲ್ಲೇ ಪೋಸ್ಟರ್‌ನಲ್ಲಿರುವ ಬರಹವೊಂದು ವೈರಲ್ ಆಗಿದೆ. ‘ಬ್ರಾಹ್ಮಣರು ವಿದೇಶಿಯರು. ಅವರ ಮನೆಗಳಲ್ಲಿ ಎ.ಸಿ (ಹವಾನಿಯಂತ್ರಣ ವ್ಯವಸ್ಥೆ) ಇದೆ’ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಸಾಕಷ್ಟು ಜನರು ಈ ಚಿತ್ರವನ್ನು ಶೇರ್ ಮಾಡಿದ್ದಾರೆ. ಅಖಿಲೇಶ್ ಅವರ ಕೋಣೆಯ ಚಿತ್ರವೊಂದನ್ನು ಪ್ರಕಟಿಸಿರುವ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, ‘ಅಖಿಲೇಶ್ ಮನೆಯಲ್ಲಿ ಎರಡು ಎ.ಸಿ ಇವೆ. ಅವರು ವಿದೇಶಿಗರೇ’ ಎಂದು ಪ್ರಶ್ನಿಸಿದ್ದಾರೆ.

ಈ ಪೋಸ್ಟರ್‌ ಈಗಿನದ್ದಲ್ಲ. ಭೀಮಾ ಕೋರೆಗಾಂವ್ ಯುದ್ಧದ 200ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಹರಿಯಾಣದ ಭಿವಾನಿಯಲ್ಲಿ 2018ರಲ್ಲಿ ನಡೆದ ವಿವಿಧ ದಲಿತ ಸಂಘಟನೆಗಳ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರದರ್ಶಿಸಲಾದ ಪೋಸ್ಟರ್ ಇದು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಆದರೆ ಮೂಲ ಪೋಸ್ಟರ್ ಅನ್ನು ತಿರುಚಲಾಗಿದೆ. ‘ಬ್ರಾಹ್ಮಣರು ವಿದೇಶಿಗರು, ಅವರ ಡಿಎನ್‌ಎ ಯುರೇಷಿಯನ್’ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ಭಾರತದಲ್ಲಿ ಮೇಲ್ಜಾತಿಗಳ ಡಿಎನ್ಎ ಯುರೋಪಿಯನ್ನರ ಡಿಎನ್‌ಎಯನ್ನು ಹೋಲುತ್ತದೆ ಎಂದು 2001ರಲ್ಲಿ ಪ್ರಕಟವಾಗಿದ್ದ ವರದಿಯ ಆಧಾರದಲ್ಲಿ ಈ ಪೋಸ್ಟರ್ ರಚಿಸಲಾಗಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು