ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19 ಬಗ್ಗೆ ಯಾವುದೇ ಮಾಹಿತಿ ಅಥವಾ ಪೋಸ್ಟ್ ಶೇರ್ ಮಾಡಬಾರದು ಎಂಬ ಸಂದೇಶ ಫೇಕ್

Last Updated 7 ಏಪ್ರಿಲ್ 2020, 3:27 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರ ಹೊರತು ಪಡಿಸಿ ಬೇರೆ ಯಾವುದೇ ವ್ಯಕ್ತಿಗಳು ಕೋವಿಡ್-19 ಸಂಬಂಧಿತ ಮಾಹಿತಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಡೇಟ್ ಮಾಡಬಾರದು, ಈ ಬಗ್ಗೆ ಪೋಸ್ಟ್ ಕೂಡಾ ಶೇರ್ ಮಾಡಬಾರದು ಎಂಬ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹಲವಾರು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಇದೇ ಸಂದೇಶ ಶೇರ್ ಆಗುತ್ತಿದ್ದು, ಇದು ಸುಳ್ಳು ಸುದ್ದಿ.

ಇವತ್ತು 12 (ಮಧ್ಯರಾತ್ರಿ) ಯಿಂದ ವಿಪತ್ತು ನಿರ್ವಹಣಾ ಕಾಯ್ದೆ ದೇಶದಾದ್ಯಂತ ಜಾರಿಗೆ ಬಂದಿದೆ. ಇದರ ಪ್ರಕಾರ ಸರ್ಕಾರದ ಇಲಾಖೆಗಳು ಹೊರತು ಪಡಿಸಿ ಯಾವುದೇ ವ್ಯಕ್ತಿಗಳು ಕೊರೊನಾ ವೈರಸ್ ಬಗ್ಗೆ ಅಪ್‌ಡೇಟ್ಮಾಡಿದರೆ ಅಥವಾ ಅಂಥಾ ವಿಷಯಗಳನ್ನು ಫಾರ್ವರ್ಡ್ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ. ಗ್ರೂಪ್ ಅಡ್ಮಿನ್‌ಗಳು ಇದನ್ನು ತಮ್ಮ ಗ್ರೂಪ್‌ಗಳಲ್ಲಿ ಪೋಸ್ಟ್ ಮಾಡಬೇಕು ಎಂದು ವಿನಂತಿ.ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂಬ ವಿಷಯಸಂದೇಶದಲ್ಲಿದೆ.

ಆ ಸಂದೇಶ ವಿಶ್ವಾಸರ್ಹ ಎಂದು ತೋರಿಸುವುದಕ್ಕಾಗಿ ಕಾನೂನು ಸುದ್ದಿತಾಣ LiveLawದಲ್ಲಿ ಪ್ರಕಟವಾಗಿರುವ ಸುದ್ದಿಯ ಲಿಂಕ್ ಕೂಡಾ ಬಳಸಲಾಗಿದೆ. ಆದರೆ ಅಲ್ಲಿ ನೀಡಿರುವ ಸುದ್ದಿ ಲಿಂಕ್ ತಪ್ಪಾದ ಮಾಹಿತಿಯಿಂದ ಕೂಡಿದೆ.

ಲೈವ್‌ಲಾ ತಾಣದಲ್ಲಿ ಮಾರ್ಚ್ 31ರಂದು ಪ್ರಕಟವಾದ ವರದಿ ಪ್ರಕಾರ ಕೊರೊನಾ ವೈರಸ್ ಸಂಬಂಧಿತ ಸುದ್ದಿಗಳನ್ನು ಮಾಧ್ಯಮಗಳು ಮುದ್ರಿಸುವ, ಪ್ರಸಾರ ಮಾಡುವ ಹಾಗೂ ಪ್ರಕಟಿಸುವ ಮೊದಲು ಸರ್ಕಾರದ ಖಚಿತತೆಯನ್ನು ಪಡೆದುಕೊಳ್ಳಲು ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ ಇದನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಇದೇ ಸುದ್ದಿಯ ವಿಷಯವನ್ನು ತಿರುಚಿ ವೈರಲ್ ಆಗಿರುವ ಫೇಕ್ ಸಂದೇಶದಲ್ಲಿ ಬಳಸಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಫೇಕ್ ಸಂದೇಶ ಹರಿದಾಡಿತ್ತು.

ಈ ಫೇಕ್ ಸುದ್ದಿ ಬಗ್ಗೆ ಪಿಬಿಬಿ ಫ್ಯಾಕ್ಟ್‌ಚೆಕ್ಟ್ವೀಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT