ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್‌: ರಕ್ಷಣೆ ವೇಳೆ ಭಾರತದ ಧ್ವಜ ತೋರಿಸಿ ಎಂದಿರುವುದು ನಿಜವೇ?

Last Updated 1 ಮಾರ್ಚ್ 2022, 22:00 IST
ಅಕ್ಷರ ಗಾತ್ರ

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಉಕ್ರೇನ್‌ನ ಸುರಕ್ಷಿತ ಸ್ಥಳಕ್ಕೆ ರವಾನಿಸುವುದಾಗಿ ಭಾರತಕ್ಕೆ ರಷ್ಯಾ ಭರವಸೆ ನೀಡಿದೆ ಎಂಬ ಮಾಹಿತಿ ಇರುವ ಪೋಸ್ಟ್‌ ವೈರಲ್ ಆಗಿದೆ. ರಷ್ಯಾದ ರಕ್ಷಣಾ ಸಚಿವ ಜನರಲ್‌ ಸೆರ್ಗೇಯ್‌ ಶೋಯ್ಗು ಅವರು ಈ ಭರವಸೆ ನೀಡಿದ್ದಾರೆ. ಭಾರತೀಯರು ತಮ್ಮ ಮನೆ ಅಥವಾ ವಾಹನದ ಮೇಲೆ ಭಾರತದ ಧ್ವಜ ಹಾರಿಸಬೇಕು. ಅದನ್ನು ನೋಡಿ ರಷ್ಯಾ ಸಶಸ್ತ್ರ ಪಡೆಯು ಭಾರತೀಯರ ಬಳಿಗೆ ಧಾವಿಸಿ ಅವರನ್ನು ರಕ್ಷಿಸುತ್ತದೆ ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ. ಇದನ್ನು ಹಲವರು ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.

ಇದು ಆಧಾರರಹಿತ ಎಂದು ‘ದಿ ಕ್ಷಿಂಟ್‌’ ವರದಿ ಮಾಡಿದೆ. ರಷ್ಯಾ ನೀಡಿದೆ ಎನ್ನಲಾದ ಹೇಳಿಕೆ ಕುರಿತು ಸರ್ಕಾರದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಯಾವುದೇ ಮಾಹಿತಿ ಇಲ್ಲ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವ ಕುರಿತು ಮಾಹಿತಿ ನೀಡುತ್ತಿರುವ ಸರ್ಕಾರದ ಅಧಿಕೃತ ಟ್ವಿಟರ್‌ ಖಾತೆ ‘ಆಪರೇಷನ್‌ ಗಂಗಾ’ದಲ್ಲೂ ಮಾಹಿತಿ ಇಲ್ಲ. ‘ರಕ್ಷಣೆ ವೇಳೆ ಭಾರತದ ಧ್ವಜ ತೋರಿಸಿ’ ಎಂದು ಕೇಂದ್ರ ಸಚಿವ ಜಿ. ಕೃಷ್ಣ ರೆಡ್ಡಿ ಅವರು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಸಲಹೆ ನೀಡಿರುವುದು ಮಾತ್ರ ಪತ್ರಿಕೆಗಳಲ್ಲಿ ವರದಿ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT