ಮಂಗಳವಾರ, ಅಕ್ಟೋಬರ್ 27, 2020
28 °C

ಫ್ಯಾಕ್ಟ್‌ಚೆಕ್‌: ‘ಮೋದಿ ಸರ್ಕಾರದ ವರ್ತನೆ ಹೀಗಿದೆ ನೋಡಿ’ ಈ ಚಿತ್ರ ಇತ್ತೀಚಿನದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಹರಿಯಾಣದ ಪಿಪ್ಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೊಲೀಸರು ಚದುರಿಸುದ್ದಾರೆ ಎಂಬ ಅಡಿಬರಹದೊಂದಿದೆ ಚಿತ್ರವೊಂದು ಇತ್ತೀಚೆಗೆ ವೈರಲ್ ಆಗಿದೆ. ಕೈಯಲ್ಲಿ ಬಂದೂಕು ಹಾಗೂ ಲಾಠಿ ಹಿಡಿದ ಪೊಲೀಸ್ ಮತ್ತು ಅವರ ಎದುರು ಕೈಯಲ್ಲಿ ಇಟ್ಟಿಗೆ ಹಿಡಿದು ಪ್ರತಿರೋಧ ತೋರುವ ಭಂಗಿಯಲ್ಲಿ ಪ್ರತಿಭಟನಕಾರ ನಿಂತಿರುವ ಚಿತ್ರ ಇದೆ.

ಯುವ ಕಾಂಗ್ರೆಸ್‌ನ ಛತ್ತೀಸ್‌ಗಡ ಘಟಕವು ತನ್ನ ಟ್ವಿಟರ್‌ ಖಾತೆಯಲ್ಲಿ ಚಿತ್ರ ಪ್ರಕಟಿಸಿದ್ದು, ‘ಮೋದಿ ಸರ್ಕಾರದ ವರ್ತನೆ ಹೀಗಿದೆ ನೋಡಿ’ ಎಂದು ಟೀಕಿಸಿದೆ. ಟ್ವಿಟರ್‌ನ ನೂರಾರು ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರ 2013ರಲ್ಲಿ ಉತ್ತರ ಪ್ರದೇಶದ ಮೀರಠ್‌ನಲ್ಲಿ ನಡೆದ ಘಟನೆಗೆ ಸಂಬಂಧಿಸಿದ್ದು ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ಮುಜಫ್ಫರ್‌ಪುರ ಗಲಭೆ ಸಂಬಂಧ ನಿಷೇಧಾಜ್ಞೆ ಉಲ್ಲಂಘಿಸಿದವರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು ಎಂದು ಹಲವು ಪತ್ರಿಕೆಗಳು ಇದೇ ಚಿತ್ರ ಬಳಸಿಕೊಂಡು ವರದಿ ಪ್ರಕಟಿಸಿದ್ದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು