ಬುಧವಾರ, ಡಿಸೆಂಬರ್ 1, 2021
21 °C

ಸರ್ಕಾರದ ಎಲ್ಲ ನೇಮಕಾತಿಗಳಿಗೆ ಕೇಂದ್ರ ನಿರ್ಬಂಧ: ಸುಳ್ಳು ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಲ್ಲಿ ಕೋವಿಡ್‌ನ ಪರಿಣಾಮ ತೀವ್ರವಾಗಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದಿಂದ ಆಘಾತಕಾರಿ ಸುದ್ದಿಯೊಂದು ಬಂದಿದೆ. ಸರ್ಕಾರದ ಎಲ್ಲ ನೇಮಕಾತಿಗಳಿಗೆ ಕೇಂದ್ರ ನಿರ್ಬಂಧ ವಿಧಿಸಿದೆ. ಹೀಗಾಗಿ ಯಾವುದೇ ಇಲಾಖೆಗಳಲ್ಲಿ ಸದ್ಯಕ್ಕೆ ನೇಮಕಾತಿಗಳು ನಡೆಯುವುದಿಲ್ಲ. ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಜನರಿಗೆ ಇದರಿಂದ ಆಘಾತವಾಗಿದೆ ಎಂಬ ಅರ್ಥದ ಸುದ್ದಿಯೊಂದು ಸುದ್ದಿವಾಹಿನಿಯೊಂದರಲ್ಲಿ ಇತ್ತೀಚೆಗೆ ವರದಿ ಪ್ರಸಾರವಾಗಿದೆ.

ಹೊಸ ನೇಮಕಾತಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ ಎಂದು ವಾಹಿನಿ ಪ್ರಸಾರ ಮಾಡಿದ ಸುದ್ದಿ ಸುಳ್ಳು ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಖಚಿತಪಡಿಸಿದೆ. ಈ ಸುದ್ದಿ ತಪ್ಪುದಾರಿಗೆ ಎಳೆಯುವಂತಿದೆ. ಸ್ಟಾಫ್‌ ಸೆಲೆಕ್ಷನ್ ಕಮಿಷನ್, ಯುಪಿಎಸ್‌ಸಿ, ರೈಲ್ವೆ ನೇಮಕಾತಿ ಮುಂತಾದ ಸರ್ಕಾರಿ ಸಂಸ್ಥೆಗಳ ಮೂಲಕ ಎಂದಿನಂತೆ ನೇಮಕ ಪ್ರಕ್ರಿಯೆ ನಡೆಯಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು