ಗುರುವಾರ , ಜುಲೈ 7, 2022
20 °C

ಫ್ಯಾಕ್ಟ್‌ ಚೆಕ್‌: ಕರ್ನಾಟಕದ ಹಿಜಾಬ್ ವಿಚಾರ–ವೈರಲ್ ಆಗಿರುವ ವಿಡಿಯೊ ಎಲ್ಲಿಯದು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈರಲ್‌ ಆಗಿರುವ ವಿಡಿಯೊದ ಸ್ಕ್ರೀನ್‌ಶಾಟ್‌

ಹಿಜಾಬ್‌ ವಿರುದ್ಧ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯುತ್ತಿದೆ ಎಂಬ ವಿವರ ಇರುವ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಜತೆಯಲ್ಲಿ ಸಾವಿರಾರು ಮಂದಿ ಮೇಲ್ಸೇತುವೆ ಮೇಲೆ ಮೆರವಣಿಗೆ ನಡೆಸುತ್ತಿರುವ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ‘ಹಿಂದೂ ಧರ್ಮವನ್ನು ರಕ್ಷಿಸಲು ಕರ್ನಾಟಕದಲ್ಲಿ ಹೊಸ ಸೇನೆಯೊಂದು ಜನ್ಮತಾಳಿದೆ ಎಂಬುದು ಅತ್ಯಂತ ಸಮಾಧಾನಕರ ವಿಚಾರ. ಇನ್ನು ಮುಂದೆ ಧರ್ಮ ರಕ್ಷಣೆಗಾಗಿ ಹಿಂದೂಗಳು ಹೆದರಬೇಕಿಲ್ಲ. ಕೇಸರಿ ಧ್ವಜ ಹಿಡಿದು ಮೆರವಣಿಗೆ ನಡೆಸುತ್ತಿರುವ ಈ ವಿದ್ಯಾರ್ಥಿಗಳನ್ನು ನೋಡಿ’ ಎಂದು ಈ ಪೋಸ್ಟ್‌ಗಳಲ್ಲಿ ಹೇಳಲಾಗಿದೆ.

ಆದರೆ ವಿಡಿಯೊ ಮತ್ತು ಈ ಪೋಸ್ಟ್‌ಗಳಲ್ಲಿ ಹಂಚಿಕೊಂಡಿರುವ ವಿವರಗಳಿಗೆ ಸಂಬಂಧವಿಲ್ಲ ಎಂದು ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಇದು ಕರ್ನಾಟಕದಲ್ಲಿ ಹಿಜಾಬ್ ವಿರುದ್ಧ ನಡೆದ ಮೆರವಣಿಗೆಯ ವಿಡಿಯೊ ಅಲ್ಲ. ಬದಲಿಗೆ 2017ರಲ್ಲಿ ಮಹಾರಾಷ್ಟ್ರದಲ್ಲಿ ಮರಾಠರು ಮೀಸಲಾತಿಗಾಗಿ ಒತ್ತಾಯಿಸಿ ಮೆರವಣಿಗೆ ನಡೆಸಿದ್ದರು. ಆ ಮೆರವಣಿಗೆ ವೇಳೆ ಕೇಸರಿ ಧ್ವಜಗಳನ್ನು ಹಿಡಿದಿದ್ದರು. ಆ ಹಳೆಯ ವಿಡಿಯೊವನ್ನೇ ಈಗ ತಪ್ಪು ಮಾಹಿತಿಯೊಂದಿಗೆ, ಕರ್ನಾಟಕದಲ್ಲಿ ಹಿಜಾಬ್ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಎಂದು ಹಂಚಿಕೊಳ್ಳಲಾಗಿದೆ. ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಆಲ್ಟ್‌ ನ್ಯೂಸ್‌ ವಿವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು