Fact Check: ಮೆಕ್ಕಾದಲ್ಲಿ ಶಿವಲಿಂಗ ಬಹಿರಂಗವಾಗಿರುವುದು ನಿಜವೇ?

‘ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ ಮತ್ತು ಮದೀನಾದಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಿವಲಿಂಗ ಬಹಿರಂಗವಾಗಿದೆ. ಎರಡೂ ಚಿತ್ರಗಳಲ್ಲಿ ಇರುವ ಶಿವಲಿಂಗವನ್ನು ಗಮನಿಸಿ. ಎಲ್ಲಾ ಹಿಂದೂಗಳಿಗೆ ತಲುಪುವವರೆಗೆ ಈ ಚಿತ್ರಗಳನ್ನು ಷೇರ್ ಮಾಡಿ’ ಎಂಬ ವಿವರ ಇರುವ ಪೋಸ್ಟ್ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ನ ಜತೆಗೆ ಮೆಕ್ಕಾದ ಒಂದು ಚಿತ್ರ ಮತ್ತು ಶಿವಲಿಂಗದ ಒಂದು ಚಿತ್ರವನ್ನು ಹಂಚಿಕೊಳ್ಳಲಾಗಿದೆ.
‘ಇದು ಸುಳ್ಳು ಸುದ್ದಿ. ಮೆಕ್ಕಾ ಮತ್ತು ಮದೀನಾ ಎರಡು ಪ್ರತ್ಯೇಕ ನಗರಗಳು. ಮೆಕ್ಕಾದಲ್ಲಿರುವ ಕಾಬಾದ ನಾಲ್ಕು ಮೂಲೆಗಳಲ್ಲಿ ಯೆಮನ್ ಮೂಲೆಯ ಚಿತ್ರವನ್ನು ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಆ ಚಿತ್ರದಲ್ಲಿ ಇರುವ ಶಿಲೆಯನ್ನು ಮುಸ್ಲಿಮರು ಮುಟ್ಟಿ ಪ್ರಾರ್ಥನೆ ಮಾಡುತ್ತಾರೆ. ಭಾರತದ ಹಜ್ ಸಮಿತಿ ಸಿದ್ಧಪಡಿಸುವ ಹಜ್ ಯಾತ್ರೆ ಕೈಪಿಡಿಯಲ್ಲೂ ಈ ಮಾಹಿತಿ ಇದೆ. ಮತ್ತೊಂದು ಚಿತ್ರದಲ್ಲಿರುವ ಶಿವಲಿಂಗವು ರಾಜಸ್ಥಾನದಲ್ಲಿ ಇದೆ. ಅದು ವೀರತ್‌ಪುರದಲ್ಲಿರುವ 12 ಮುಖಗಳಿರುವ ಶಿವಲಿಂಗದ ಚಿತ್ರ. ಎರಡೂ ಚಿತ್ರಗಳ ಮಾಹಿತಿಯನ್ನು ತಿರುಚಿ ಈ ಸುಳ್ಳು ಸುದ್ದಿ ಸೃಷ್ಟಿಸಲಾಗಿದೆ’ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.