ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

fact check: ಅಮಿತ್ ಶಾ ಪ.ಬಂಗಾಳ ಭೇಟಿ ಬಳಿಕ ಕಣ್ಣೀರು ಹಾಕಿದರೇ ಮಮತಾ ಬ್ಯಾನರ್ಜಿ?

Last Updated 23 ಡಿಸೆಂಬರ್ 2020, 21:23 IST
ಅಕ್ಷರ ಗಾತ್ರ

ಕೇಂದ್ರ ಗೃಹ ಸಚಿವ ಅಮಿತ್ ಶಾಅವರು ಪಶ್ಚಿಮ ಬಂಗಾಳಕ್ಕೆ ಇತ್ತೀಚೆಗೆ ಭೇಟಿ ನೀಡಿ ಹೋದ ಮೇಲೆಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಕಣ್ಣೀರು ಹಾಕಿದ್ದಾರೆ. ಅವರು ಕಣ್ಣೀರಿಟ್ಟಿದ್ದಾರೆ ಎಂದು ಹೇಳಲಾಗುವ ವಿಡಿಯೊ ವೈರಲ್ ಆಗಿದೆ.

ವಿಡಿಯೊವನ್ನು ಪರಿಶೀಲಿಸಿದಾಗ ಅದು ಜ.8, 2020ರಂದು ಯೂಟ್ಯೂಬ್‌ಗೆ ಅಪ್ಲೋಡ್ ಆಗಿರುವುದು ತಿಳಿದುಬಂದಿದೆ. ಇದೇ ವಿಡಿಯೊ ಜ.2, 2019ರಲ್ಲಿಯೂ ಯೂಟ್ಯೂಬ್‌ಗೆ ಸೇರ್ಪಡೆಯಾಗಿದೆ. ಮತ್ತೆ ಪರಿಶೀಲಿಸಿದಾಗ 2006ರಲ್ಲಿ ಸಿಂಗೂರ್‌ಗೆ ಭೇಟಿ ನೀಡಲು ಅವಕಾಶ ಸಿಗದ್ದಕ್ಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದ ಸುದ್ದಿ ಡಿಎನ್‌ಎ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಭೇಟಿಗೆ ಅವಕಾಶ ಸಿಗದ್ದಕ್ಕೆ ಅವರು ಗದ್ಗದಿತರಾಗಿದ್ದ ವಿಡಿಯೊವನ್ನು ಎನ್‌ಡಿಟಿವಿ ಪ್ರಸಾರ ಮಾಡಿತ್ತು. ಅಂದರೆ ವಿಡಿಯೊ 2006ನೇ ಇಸ್ವಿಗೆ ಸಂಬಂಧಿಸಿದ್ದು, ಅಮಿತ್ ಶಾ ಭೇಟಿಯ ಸಮಯದ್ದಲ್ಲ ಎಂದು ಲಾಜಿಕಲ್ ಇಂಡಿಯನ್ಸ್ ವೆಬ್‌ಸೈಟ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT