Factcheck: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವಯಂಸೇವಕರಿಗೂ ಪದಕ?

‘ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವಯಂಸೇವಕರಿಗೆ ಪದಕ ನೀಡಲಾಗುತ್ತದೆ. ಆ ಪದಕದ ಮೇಲೆ ವಿಶ್ವದ ಹಲವು ಭಾಷೆಗಳಲ್ಲಿ ಸ್ವಯಂಸೇವಕ ಎಂದು ಬರೆಯಲಾಗಿದೆ. ಭಾರತದ ರಾಷ್ಟ್ರೀಯ ಭಾಷೆಯಾದ ಹಿಂದಿಯಲ್ಲಿಯೂ ‘ಸ್ವಯಂಸೇವಕ್’ ಎಂದು ಬರೆಯಲಾಗಿದೆ. ಇದು ಭಾರತಕ್ಕೆ ಸಿಕ್ಕ ಗೌರವ’ ಎಂದು ಮೇಜರ್ ಸುರೇಂದ್ರ ಪೂನಿಯಾ ಎಂಬ ಬಿಜೆಪಿ ಕಾರ್ಯಕರ್ತ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಅನ್ನು 2,500ಕ್ಕೂ ಹೆಚ್ಚು ಭಾರಿ ರಿಟ್ವೀಟ್ ಮಾಡಲಾಗಿದೆ. ಫೇಸ್‌ಬುಕ್‌ನಲ್ಲೂ ಈ ವಿವರ ಇರುವ ಪೋಸ್ಟ್‌ಗಳನ್ನು ಸಾವಿರಾರು ಬಾರಿ ಹಂಚಿಕೊಳ್ಳಲಾಗಿದೆ. ಈ ಟ್ವೀಟ್ ಮತ್ತು ಪೋಸ್ಟ್‌ಗಳ ಜತೆಗೆ ಪದಕದ ಚಿತ್ರವನ್ನೂ ಹಂಚಿಕೊಳ್ಳಲಾಗಿದೆ. ಎಲ್ಲವೂ ವೈರಲ್ ಆಗಿವೆ.
‘ಇದು ಸುಳ್ಳು ಸುದ್ದಿ. ಯಾವ ಒಲಿಂಪಿಕ್ಸ್‌ನಲ್ಲಿಯೂ ಸ್ವಯಂಸೇವಕರಿಗೆ ಪದಕ ನೀಡುವುದಿಲ್ಲ. ಜಪಾನ್‌ನಲ್ಲಿ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಸ್ವಯಂಸೇವಕರಿಗೆ ಪದಕ ನೀಡುತ್ತಿಲ್ಲ. ಅವರಿಗೆ ಟೋಕಿಯೊದಲ್ಲಿ ಓಡಾಡಲು ಪ್ರಯಾಣ ಭತ್ಯೆ ಮತ್ತು ಊಟೋಪಚಾರ ಮಾತ್ರ ನೀಡಲಾಗುತ್ತದೆ ಎಂಬ ವಿವರ ಟೋಕಿಯೊ ಒಲಿಂಪಿಕ್ಸ್‌ನ ಅಧಿಕೃತ ಜಾಲತಾಣದಲ್ಲಿ ಇದೆ. ವೈರಲ್ ಆಗಿರುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್‌ನಲ್ಲಿ ಹುಡಕಲಾಯಿತು. ಅದು ಅಮೆರಿಕದಲ್ಲಿ ಇ-ಬೇ ಇ-ಕಾಮರ್ಸ್‌ನಲ್ಲಿ ಮಾರಾಟಕ್ಕೆ ಇಡಲಾಗಿರುವ ಬ್ಯಾಡ್ಜ್‌ನ ಚಿತ್ರ. ಈ ಬ್ಯಾಡ್ಜ್ ಅನ್ನೇ ಒಲಿಂಪಿಕ್ಸ್‌ನಲ್ಲಿ ಸ್ವಯಂಸವೇಕರಿಗೆ ನೀಡಲಾಗುವ ಪದಕ ಎಂದು ಸುಳ್ಳು ಸುದ್ದಿ ಸೃಷ್ಟಿಲಾಗಿದೆ’ ಎಂದು ಆಲ್ಟ್‌ನ್ಯೂಸ್ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.