ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಬೌದ್ಧ ಧರ್ಮಕ್ಕೆ ಧೋನಿ ಮತಾಂತರ?

Last Updated 16 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಮಹೇಂದ್ರ ಸಿಂಗ್ ಧೋನಿ ಎಂದರೆ ಭಾರತೀಯ ಕ್ರಿಕೆಟ್‌ನ‌ ಬಹುದೊಡ್ಡ ಹೆಸರು. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಸದ್ಯ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ಧೋನಿ ಅವರ ಒಂದು ಚಿತ್ರ ಇತ್ತೀಚೆಗೆ ಭಾರಿ ಸದ್ದು ಮಾಡಿದೆ. ಅವರು ಧರಿಸಿರುವ ದಿರಿಸು ಗಮನಿಸಿದರೆ, ಅವರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಭಾವನೆ ಬರುತ್ತದೆ. ಹಲವು ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಬಗ್ಗೆಯೇ ಚರ್ಚೆ ನಡೆಸಿದ್ದಾರೆ.

ಧೋನಿ ಅವರ ಹೊಸ ದಿರಿಸು ಬೌದ್ಧಧರ್ಮಕ್ಕೆ ಸಂಬಂಧಿಸಿದೆ ಎಂಬುದೇನೋ ನಿಜ. ಆದರೆ ಅವರು ಮತಾಂತರ ಆಗಿಲ್ಲ ಎಂದು ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ತಿಳಿಸಿದೆ. ಧೋನಿ ಅವರು ಕೇವಲ ಜಾಹೀರಾತಿಗಾಗಿ ಬೌದ್ಧ ಬಿಕ್ಕುಗಳು ಧರಿಸುವ ಬಟ್ಟೆ ತೊಟ್ಟಿದ್ದಾರೆ ಎಂದು ಖಚಿತಪಡಿಸಿದೆ. ಏಪ್ರಿಲ್ 9ರಿಂದ ಆರಂಭವಾಗುವ ಐಪಿಎಲ್ ಸರಣಿಯ ಜಾಹೀರಾತಿಗಾಗಿ ಧೋನಿ ಅವರನ್ನು ಹೀಗೆ ಬಳಸಿಕೊಳ್ಳಲಾಗಿದೆ. ಧೋನಿ ಅವರ ಮ್ಯಾನೇಜರ್ ಅರುಣ್ ಪಾಂಡೆ ಅವರು ಇದನ್ನು ಖಚಿತಪಡಿಸಿದ್ದಾರೆ.

ವಿಡಿಯೊ: ಐಪಿಎಲ್‌ ಜಾಹೀರಾತಿನಲ್ಲಿ ಬೌದ್ಧ ಬಿಕ್ಕುವಾಗಿ ಕಾಣಿಸಿಕೊಂಡಿರುವ ಧೋನಿ–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT