ಮಂಗಳವಾರ, ಆಗಸ್ಟ್ 3, 2021
22 °C

Fact Check: ಸೋಷಿಯಲ್ ಮೀಡಿಯಾದ ಮೇಲೆ ಕಣ್ಣಿಡಲು ಸರ್ಕಾರದಿಂದ ಹೊಸ ನಿಯಮ?

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 'ಭಾರತ ಸರ್ಕಾರವು ಈಗ ಸಾಮಾಜಿಕ ಸಂವಹನ ಮತ್ತು ಫೋನ್ ಕರೆಗಳನ್ನು 'ಹೊಸ ಸಂವಹನ ನಿಯಮಗಳ' ಅಡಿಯಲ್ಲಿ ಮೇಲ್ವಿಚಾರಣೆ ಮಾಡುತ್ತದೆ' ಎಂಬ ಸಂದೇಶ ವೈರಲ್‌ ಆಗಿತ್ತು. ಈ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ನಡೆಸಿದೆ.

'ಈ ಹೇಳಿಕೆಯು ನಕಲಿಯಾಗಿದ್ದು, ಅಂತಹ ಯಾವುದೇ ನಿಯಮವನ್ನು ಭಾರತ ಸರ್ಕಾರ ಜಾರಿಗೆ ತಂದಿಲ್ಲ. ಅಂತಹ ಯಾವುದೇ ನಕಲಿ ಅಥವಾ ಅಸ್ಪಷ್ಟ ಮಾಹಿತಿಯನ್ನು ರವಾನಿಸಬೇಡಿ' ಎಂದು ಅದು ಸ್ಪಷ್ಟಪಡಿಸಿದೆ.

ಪಿಐಬಿ ಫ್ಯಾಕ್ಟ್ ಚೆಕ್ ಎನ್ನುವುದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಮಾಹಿತಿ ಬ್ಯೂರೋ (ಪಿಐಬಿ) ನಡೆಸುತ್ತಿರುವ ಸಾಮಾಜಿಕ ಮಾಧ್ಯಮದ ಖಾತೆಯಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರ, ಸಾಮಾಜಿಕ ಮಾಧ್ಯಮಗಳು ಅಥವಾ ವ್ಯಕ್ತಿಗಳ ಫೋನ್ ಕರೆಗಳನ್ನು ಪರಿಶೀಲಿಸಲು ಯಾವುದೇ ಹೊಸ ನಿಯಮವನ್ನು ಜಾರಿಗೆ ತಂದಿಲ್ಲ ಎಂದು ಗುರುವಾರ ತಿಳಿಸಿದೆ.

ಹೊಸ ಸಾಮಾಜಿಕ ಮಾಧ್ಯಮದ ನಿಯಮಗಳು ಮತ್ತು ದೆಹಲಿ ಪೊಲೀಸ್ ಸಿಬ್ಬಂದಿ ಇತ್ತೀಚೆಗೆ ಟ್ವಿಟರ್ ಇಂಡಿಯಾದ ಕಚೇರಿಗಳಿಗೆ ಭೇಟಿ ನೀಡಿದ್ದಕ್ಕಾಗಿ ಸರ್ಕಾರ ಮತ್ತು ಟ್ವಿಟರ್ ಮಧ್ಯೆ ತಿಕ್ಕಾಟ ನಡೆದಿದೆ. ಈ ನಡುವೆ ಸುಳ್ಳು ಸಂದೇಶ ಹರಿದಾಡಿ ಗೊಂದಲ ಸೃಷ್ಟಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು