ಗುರುವಾರ , ಜೂನ್ 4, 2020
27 °C

Fact Check | ಜಗತ್ತಿನಲ್ಲಿ ಯಾವ ಸಸ್ಯಾಹಾರಿಯೂ ಕೋವಿಡ್‌–19ರಿಂದಾಗಿ ಸತ್ತಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ಜಗತ್ತಿನಲ್ಲಿ ಯಾವ ಸಸ್ಯಾಹಾರಿಯೂ ಕೋವಿಡ್‌–19ರಿಂದಾಗಿ ಸತ್ತಿಲ್ಲ. ಮಾನವ ಶರೀರದೊಳಗೆ ಕೊರೊನಾ ವೈರಸ್‌ ಜೀವಂತವಾಗಿರಲು ಅದಕ್ಕೆ ಪ್ರಾಣಿಗಳ ಪ್ರೊಟೀನ್‌ ಅಗತ್ಯ. ಆದ್ದರಿಂದ ಮಾಂಸಾಹಾರಿಗಳಿಗೆ ಮಾತ್ರ ಈ ಸೋಂಕು ತಗಲುತ್ತದೆ. ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೂ ದೃಢಪಡಿಸಿದೆ’ ಎಂಬ ಸುದ್ದಿ ವೈರಲ್‌ ಆಗಿದೆ. ಟ್ವಿಟರ್‌ನಲ್ಲಿ ಈ ಸುದ್ದಿಗೆ ಹಲವು ಲೈಕ್‌ಗಳು ಬಂದಿರುವುದಲ್ಲದೆ, ಸಾವಿರಾರು ಬಾರಿ ಮರು ಟ್ವೀಟ್‌ ಆಗಿದೆ.‌

‘ಅಂಥ ಯಾವುದೇ ಹೇಳಿಕೆಯನ್ನು ನೀಡಿಲ್ಲ, ಸಸ್ಯಾಹಾರಿಗಳು ಕೋವಿಡ್‌ನಿಂದಾಗಿ ಸತ್ತಿಲ್ಲ ಎಂಬುದಾಗಿ ಯಾವ ವರದಿಯಲ್ಲೂ ಹೇಳಿಲ್ಲ’ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ. ಪ್ರಾಣಿಗಳ ಮಾರಾಟ ಕೇಂದ್ರದಿಂದ ಈ ವೈರಸ್‌ ಪ್ರಸರಣ ಕಂಡಿದೆ ಎಂಬ ಕಾರಣಕ್ಕೆ ಈ ಸುದ್ದಿ ಹಬ್ಬಿಸಿರಬಹುದು ಎಂದು  ಅದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು