ಮಂಗಳವಾರ, ಆಗಸ್ಟ್ 4, 2020
22 °C

ಶವಸಂಸ್ಕಾರದ ವೇಳೆ ಅಂಗಾಂಗ ಕಾಣೆಯಾಗಿದ್ದನ್ನು ಸಂಬಂಧಿಕರು ಪತ್ತೆಹಚ್ಚಿದ್ದು ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

factcheck

ಕೋವಿಡ್‌ನಿಂದ ಸಾವನ್ನಪ್ಪಿದ ರೋಗಿಗಳ ಮೃತದೇಹಗಳಿಂದ ಅಂಗಾಂಗಳು ಕಾಣೆಯಾಗಿರುವ ಕುರಿತು ಕೆಲವು ಸುದ್ದಿವಾಹಿನಿಗಳು ವರದಿ ಮಾಡಿವೆ. ಜುಲೈ 20ರಂದು ಮುಂಬೈನ ಗೊರಾಯ್ ಎಂಬಲ್ಲಿ ಶವ ಸಂಸ್ಕಾರದ ವೇಳೆ ಅಂಗಾಂಗ ಕಾಣೆಯಾಗಿರುವುದನ್ನು ಸಂಬಂಧಿಕರು ಪತ್ತೆಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿದ ಎರಡು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದವು. ಮೃತದೇಹಕ್ಕೆ ಹೊದಿಸಿರುವ ಬಿಳಿ ಬಟ್ಟೆಯ ಮೇಲೆ ರಕ್ತದ ಕಲೆಗಳು ಕಾಣಿಸುತ್ತಿವೆ. ಇದು ಮಾನವ ಅಂಗಾಂಗಳ ಕಳ್ಳಸಾಗಣೆ ಎಂಬುದಾಗಿ ಸುದ್ದಿ ಪ್ರಸಾರವಾಗಿತ್ತು.

ಈ ಬಗ್ಗೆ ಆಲ್ಟ್ ನ್ಯೂಸ್ ನಡೆಸಿದ ಫ್ಯಾಕ್ಟ್‌ ಚೆಕ್‌ನಲ್ಲಿ ಈ ಸುದ್ದಿ ಸುಳ್ಳು ಎಂಬುದು ದೃಢಪಟ್ಟಿದೆ. ಈ ಚಿತ್ರಗಳು ಲಖನೌದ ಭೇಸ ಕುಂದ್ ಚಿತಾಗಾರಕ್ಕೆ ಸಂಬಂಧಿಸಿವೆ. ವಾರಸುದಾರರಿಲ್ಲದ ಶವಗಳನ್ನು ಅಂತ್ಯಸಂಸ್ಕಾರ ನಡೆಸಲು ಅಲ್ಲಿ ಇರಿಸಲಾಗಿತ್ತು ಎಂಬುದು ಸ್ಪಷ್ಟಗೊಂಡಿದೆ. ಈ ಸಂಬಂಧ ಹರಿದಾಡಿರುವ ವಿಡಿಯೊ ಸಹ ಸುಳ್ಳು ಎಂಬುದು ಸಾಬೀತಾಗಿದೆ. ಮಾನವ ಅಂಗಾಂಗ ಕಳ್ಳಸಾಗಣೆಗೂ, ಈ ಮೃತದೇಹಗಳಿಗೂ ಸಂಬಂಧವಿಲ್ಲ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು