ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್ | ಚಿತ್ರಕ್ಕೆ ನಮಿಸುತ್ತಿರುವ ಬಾಲಕಿ ಹುತಾತ್ಮ ಯೋಧನ ಮಗಳಲ್ಲ

Last Updated 17 ಜೂನ್ 2020, 15:25 IST
ಅಕ್ಷರ ಗಾತ್ರ

ಗಾಲ್ವನ್‌ ಕಣಿವೆ ಪ್ರದೇಶದಲ್ಲಿ ಚೀನಾ ಸೇನೆಯ ವಿರುದ್ಧ ನಡೆದ ಸಂಘರ್ಷದಲ್ಲಿ ಕರ್ನಲ್ ಬಿ. ಸಂತೋಷ್‌ ಬಾಬು ಸೇರಿದಂತೆ ಒಟ್ಟು 20 ಯೋಧರುಹುತಾತ್ಮರಾಗಿದ್ದಾರೆ. ಸಂತೋಷ್‌ ಬಾಬು ಅವರ ಭಾವಚಿತ್ರದ ಎದುರು ಪುಟ್ಟ ಬಾಲಕಿಯೊಬ್ಬಳು ಕೈಮುಗಿಯುತ್ತಿರುವ ಚಿತ್ರವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆ ಬಾಲಕಿ ಸಂತೋಷ್‌ ಬಾಬು ಪುತ್ರಿ ಎಂದು ಬಿಂಬಿಸಲಾಗುತ್ತಿದೆ.

ಚಿತ್ರವನ್ನು ಹಂಚಿಕೊಂಡಿರುವ ಸಾಕಷ್ಟು ಸೆಲೆಬ್ರಿಟಿಗಳು, ರಾಜಕಾರಣಿಗಳು, ಆಕೆಯ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದೆಲ್ಲಾ ಬರೆದುಕೊಂಡಿದ್ದರು. ಆದರೆ, ಆ ಬಾಲಕಿ ಸಂತೋಷ್ ಬಾಬು ಅವರ ಮಗಳಲ್ಲ. ಆಕೆ ಬೆಂಗಳೂರಿನ ನೆಲಮಂಗಲದವಳು. ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಕಾರ್ಯಕರ್ತನೊಬ್ಬ ತನ್ನ ತಂಗಿ, ಸಂತೋಷ್‌ ಅವರ ಭಾವಚಿತ್ರಕ್ಕೆ ನಮಿಸುತ್ತಿರುವ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು.

ಇದೇ ಚಿತ್ರವನ್ನು ಎಬಿವಿಪಿ ಪುಟದಲ್ಲೂ ಹಂಚಿಕೊಳ್ಳಲಾಗಿದೆ.

ಚಿತ್ರದ ಜೊತೆಗೆ, ‘ಕರ್ನಾಟಕದ ನೆಲಮಂಗಲ ತಾಲ್ಲೂಕಿನ ಎಬಿವಿಪಿ ಕಾರ್ಯಕರ್ತ ತನ್ನ ಪುಟ್ಟ ತಂಗಿಯೊಂದಿಗೆ ಲಡಾಖ್‌ನ ಗಾಲ್ವನ್‌ ಕಣಿವೆಯಲ್ಲಿ ಹುತಾತ್ಮರಾದ ಸಂತೋಷ್‌ ಬಾಬು ಅವರಿಗೆ ನಮನ ಸಲ್ಲಿಸಿದರು’ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಆದಾಗ್ಯೂ ತಪ್ಪು ಮಾಹಿತಿ ಹರಿದಾಡುತ್ತಿದೆ.

ಈ ಕುರಿತುಎಬಿವಿಪಿ ಮತ್ತೊಂದು ಪೋಸ್ಟ್‌ನಲ್ಲಿ ಸ್ಪಷ್ಟನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT