ಸೋಮವಾರ, ಜನವರಿ 24, 2022
21 °C

ಫ್ಯಾಕ್ಟ್‌ ಚೆಕ್‌: ಸಾಮಾಜಿಕ ಜಾಲತಾಣಗಳಲ್ಲಿ ಬಾಬರಿ ಮಸೀದಿಯದ್ದು ಎನ್ನಲಾದ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಬರಿ ಮಸೀದಿ ಕೆಡವಿ 29 ವರ್ಷಗಳಾದ ಸಂದರ್ಭದಲ್ಲಿ, ಬಾಬರಿ ಮಸೀದಿಯದ್ದು ಎನ್ನಲಾದ ಹಲವಾರು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಮಸೀದಿಯ ಕೆಲವು ಚಿತ್ರಗಳನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ, ‘ಬಾಬರಿ ಮಸೀದಿಯ ಕೆಲವು ಚಿತ್ರಗಳನ್ನು ಬ್ರಿಟಿಷ್‌ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ’ ಎಂದು ಹೇಳಲಾಗಿದೆ. ಬೇರೆ ಚಿತ್ರಗಳನ್ನು ಇದೇ ರೀತಿಯ ಅಡಿಬರಹದ ಜೊತೆ ಫೇಸ್‌ಬುಕ್‌ನಲ್ಲಿ ಕೂಡಾ ಪೋಸ್ಟ್‌ ಮಾಡಲಾಗಿದೆ.

ಈ ಚಿತ್ರಗಳು ಬಾಬರಿ ಮಸೀದಿಯದ್ದಲ್ಲ ಎಂದು ‘ದಿ ಕ್ವಿಂಟ್‌’ ವರದಿ ಮಾಡಿದೆ. ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಲಾಗಿರುವ ಆರು ಚಿತ್ರಗಳಲ್ಲಿ ಐದು ಚಿತ್ರಗಳು ಬಾಬರಿ ಮಸೀದಿಯದ್ದಲ್ಲ ಎನ್ನಲಾಗಿದೆ. ಪಶ್ವಿಮ ಬಂಗಾಳದ ಮುರ್ಶಿದಾಬಾದ್‌ನ ಮೋತಿಜೀಲ್ ಮಸೀದಿ, ಕರ್ನಾಟಕದ ಕಲಬುರಗಿಯ ಜಾಮಿಯ ಮಸೀದಿ, ವಿಜಯಪುರದ ಇಬ್ರಾಹಿಂ ರೋಜಾ, ಟರ್ಕಿ ಮತ್ತು ಅಫ್ಗಾನಿಸ್ತಾನದ ಎರಡು ಮಸೀದಿಗಳ ಚಿತ್ರಗಳು ಇದರಲ್ಲಿವೆ ಎಂದು ದಿ ಕ್ವಿಂಟ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು