ಪ್ರಧಾನಿ ನರೇಂದ್ರ ಮೋದಿ ಸಹೋದರ ಆಟೊ ಚಾಲಕನೇ?

ಬುಧವಾರ, ಜೂನ್ 26, 2019
29 °C
ಫ್ಯಾಕ್ಟ್‌ ಚೆಕ್

ಪ್ರಧಾನಿ ನರೇಂದ್ರ ಮೋದಿ ಸಹೋದರ ಆಟೊ ಚಾಲಕನೇ?

Published:
Updated:

ಬೆಂಗಳೂರು: ‘ಅವರ ಹಿರಿಯ ಸಹೋದರ ಭಾರತದ ಪ್ರಧಾನ ಮಂತ್ರಿ. ಅವರ ಕಿರಿಯ ಸಹೋದರ ಆಟೊ ಚಾಲಕ. ನಮ್ಮ ಪ್ರಧಾನಿ ಧನ್ಯರು.’ ಹೀಗೊಂದು ಸಂದೇಶ ಬಿಜೆಪಿ–ನವದೆಹಲಿ ಎಂಬ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಹೋಲುವ ಮುಖಚರ್ಯೆಯಿರುವ ಆಟೊ ಚಾಲಕರೊಬ್ಬರ ಚಿತ್ರವಿದೆ.

ಈ ಸಂದೇಶ ಈವರೆಗೆ 460ಕ್ಕೂ ಹೆಚ್ಚು ಶೇರ್ ಆಗಿದೆ. ಇದೇ ಸಂದೇಶ ನರೇಂದ್ರ ಮೋದಿ ಎಂಬ ಫೇಸ್‌ಬುಕ್ ಪುಟದಲ್ಲಿಯೂ ಪ್ರಕಟವಾಗಿದ್ದು, 249ರಷ್ಟು ಶೇರ್ ಆಗಿದೆ. ಈ ಸಂದೇಶವನ್ನು ಅನೇಕ ಮಂದಿ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಟ್ವಿಟರ್‌ನಲ್ಲಿಯೂ ಶೇರ್ ಆಗಿದೆ.

ಮೋದಿ ಸಹೋದರ ಅಲ್ಲ!

ಮೋದಿ ಅವರಂತೆಯೇ ಕಾಣುವ ಈ ವ್ಯಕ್ತಿ ಅವರ ಸಹೋದರನಲ್ಲ. ಈ ಫೋಟೊ 2016ರಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇದನ್ನು ನವಭಾರತ್ ಟೈಮ್ಸ್‌ ಆಗಲೇ ಫ್ಯಾಕ್ಟ್‌ ಚೆಕ್ ನಡೆಸಿ ಬಯಲಿಗೆಳೆದಿತ್ತು.

ಫೋಟೊದಲ್ಲಿ ಕಾಣುವ ವ್ಯಕ್ತಿಯ ಹೆಸರು ಶೇಖ್ ಆಯುಬ್. ಇವರು ತೆಲಂಗಾಣದ ಅದಿಲಾಬಾದ್‌ನಲ್ಲಿ ಆಟೊ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ಪ್ರಧಾನಿ ಮೋದಿ ಅವರ ಸಹೋರರು ಯಾರೂ ಆಟೊ ಚಾಲಕರಲ್ಲ ಎಂಬುದೂ ಗಮನಾರ್ಹ. ಮೋದಿಗೆ ಸೋಮ್‌ಭಾಯಿ ಮೋದಿ, ಅಮೃತ್ ಮೋದಿ ಮತ್ತು ಪ್ರಹ್ಲಾದ್ ಮೋದಿ ಹೆಸರಿನ ಮೂವರು ಸಹೋದರರಿದ್ದಾರೆ. ಇಂಡಿಯಾ ಟುಡೆ ಲೇಖನವೊಂದರ ಪ್ರಕಾರ, ಸೋಮ್‌ಭಾಯಿ ಅವರು ಗುಜರಾತ್‌ನ ವಡ್‌ನಗರದಲ್ಲಿ ವೃದ್ಧಾಶ್ರಮ ನಡೆಸುತ್ತಿದ್ದಾರೆ. ಅಮೃತ್ ಮೋದಿ ಅವರು ಖಾಸಗಿ ಕಂಪನಿಯೊಂದರಲ್ಲಿ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದರೆ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಅವರು ಅಂಗಡಿಯೊಂದರ ಮಾಲೀಕರಾಗಿದ್ದಾರೆ.

ಇನ್ನಷ್ಟು...

ಪ್ರಧಾನಿ ಮೋದಿಗೆ ಮಾಲ್ಡೀವ್ಸ್‌ ಅತ್ಯುನ್ನತ ಗೌರವ​

 ಕೇರಳ | ಕೃಷ್ಣ ದೇವಾಲಯದಲ್ಲಿ ಮೋದಿ ತಾವರೆ ತುಲಾಭಾರ ಸೇವೆ

ಫ್ಯಾಕ್ಟ್‌ಚೆಕ್ | ‘ಮೋದಿ ಮಸಾಲೆ’ ಆಗಿಲ್ಲ ‘ಕಾಂಗ್ರೆಸ್ ಕಡ್ಲೆಬೀಜ’​

ದೇಶದಲ್ಲಿ ವಿಷದ ಜತೆ ಹೋರಾಡುತ್ತಿದ್ದೇವೆ, ಮೋದಿಯೇ ಆ ವಿಷ: ರಾಹುಲ್‌ ಗಾಂಧಿ ಟೀಕೆ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 7

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !