ಫ್ಯಾಕ್ಟ್ಚೆಕ್: ಬಿಜೆಪಿಯ ಸಭೆಯೊಂದರಲ್ಲಿ ರಾಹುಲ್ ದ್ರಾವಿಡ್?

ಭಾರತ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ಬಿಜೆಪಿಯ ಸಭೆಯೊಂದರಲ್ಲಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಇದೇ 12ರಿಂದ 15ರ ವರೆಗೆ ಬಿಜೆಪಿಯ ಯುವ ಮೋರ್ಚಾದ ಸಭೆ ಆಯೋಜನೆ ಆಗಿದೆ. ಈ ಸಭೆಯಲ್ಲಿ ದ್ರಾವಿಡ್ ಅವರು ಭಾಗಿ ಆಗಲಿದ್ದಾರೆ ಎಂದು ಬಿಜೆಪಿ ಶಾಸಕ ವಿಶಾಲ್ ನಹೆರಿಯ ಅವರು ಹೇಳಿಕೆ ನೀಡಿದ್ದರು. ಬಳಿಕ, ದ್ರಾವಿಡ್ ಅವರು ಬಿಜೆಪಿಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿಯನ್ನು ಹಲವಾರು ಮಾಧ್ಯಮಗಳು ವರದಿ ಮಾಡಿದ್ದವು.
ಈ ಸುದ್ದಿಯನ್ನು ರಾಹುಲ್ ದ್ರಾವಿಡ್ ಅವರು ಅಲ್ಲಗಳೆದಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ‘ಬಿಜೆಪಿ ಆಯೋಜಿಸಿರುವ ಸಭೆಯಲ್ಲಿ ನಾನು ಪಾಲ್ಗೊಳ್ಳಲಿದ್ದೇನೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ವರದಿಗಳು ನಿಜವಲ್ಲ. ನಾನು ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ’ ಎಂದು ದ್ರಾವಿಡ್ ಅವರು ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ ಎಂದು ಎಎನ್ಐ ಟ್ವೀಟ್ ಮಾಡಿದೆ. ಬಿಸಿಸಿಐ ಕೂಡಾ ಈ ವರದಿಯನ್ನು ಅಲ್ಲಗಳೆದಿದೆ ಎಂದು ‘ಹಿಂದುಸ್ಥಾನ್ ಟೈಮ್ಸ್’ ವರದಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.