ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್: ರಿಯಾನಾ ಪಾಕಿಸ್ತಾನದವರಾದ ಕಾರಣ ರೈತ ಹೋರಾಟಕ್ಕೆ ಬೆಂಬಲ ನೀಡಿದರೇ?

Last Updated 12 ಫೆಬ್ರುವರಿ 2021, 12:55 IST
ಅಕ್ಷರ ಗಾತ್ರ

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಅಂತರರಾಷ್ಟ್ರೀಯ ಪಾಪ್‌ ಗಾಯಕಿ ಮತ್ತು ನಟಿ ರಿಯಾನಾ ಅವರು ಪಾಕಿಸ್ತಾನದ ಧ್ವಜ ಹಿಡಿದುಕೊಂಡಿರುವ ಚಿತ್ರ ಮತ್ತು ಚಿತ್ರವಿರುವ ವಿಡಿಯೊ ಟ್ವಿಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ವೈರಲ್ ಆಗಿದೆ. ರಿಯಾನಾ ಅವರು ಮುಸ್ಲಿಂ. ಅವರು ಪಾಕಿಸ್ತಾನಿ.

ಹೀಗಾಗಿಯೇ ಅವರು ಭಾರತದ ರೈತರನ್ನು ಬೆಂಬಲಿಸುತ್ತಿದ್ದಾರೆ. ಭಾರತ ಸರ್ಕಾರದ ವಿರುದ್ಧವಾಗಿ ಟ್ವೀಟ್ ಮಾಡುತ್ತಿದ್ದಾರೆ ಎಂಬ ಒಕ್ಕಣೆ ಇರುವ ಟ್ವೀಟ್‌ಗಳು ವೈರಲ್ ಆಗಿವೆ. ಉತ್ತರಪ್ರದೇಶ ಬಿಜೆಪಿ ವಕ್ತಾರ ಶಲಾಭ್ ಮಣಿ ತ್ರಿಪಾಠಿ ಅವರು ಮೊದಲು ಈ ಟ್ವೀಟ್ ಮಾಡಿದ್ದಾರೆ. ಬಿಜೆಪಿಯ ಹಲವು ನಾಯಕರು ಇದನ್ನು ಮರುಟ್ವೀಟ್ ಮಾಡಿದ್ದಾರೆ.

ಆದರೆಇದು ತಿರುಚಲಾದ ಚಿತ್ರ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ಶಲಾಭ್ ಮಣಿ ತ್ರಿಪಾಠಿ ಅವರು ತಿರುಚಲಾದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ರಿಹಾನ ಅವರು 2019ರ ಐಸಿಸಿ ವರ್ಲ್ಡ್‌ಕಪ್‌ನಲ್ಲಿ ವೆಸ್ಟ್‌ ಇಂಡೀಸ್ ಮತ್ತು ಶ್ರೀಲಂಕಾ ನಡುವಣ ಪಂದ್ಯದ ವೇಳೆ ವೆಸ್ಟ್‌ ಇಂಡೀಸ್‌ನ ಧ್ವಜವನ್ನು ಹಿಡಿದಿದ್ದರು. 2019ರ ಜುಲೈ 1ರಂದು ಐಸಿಸಿ ಈ ಚಿತ್ರವನ್ನು ಟ್ವೀಟ್ ಮಾಡಿತ್ತು. ಆ ಚಿತ್ರವನ್ನೇ ತಿರುಚಿ, ಪಾಕಿಸ್ತಾನದ ಧ್ವಜವನ್ನು ಹಾಕಲಾಗಿದೆ ಎಂದು ಆಲ್ಟ್‌ನ್ಯೂಸ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT