ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact check: ದೆಹಲಿ ಸರ್ಕಾರವು ಮದ್ಯಪಾನವನ್ನು ಉತ್ತೇಜಿಸುತ್ತಿದೆಯೇ?

Last Updated 14 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬಾಗಿಲು ಮುಚ್ಚಿರುವ ಅಂಗಡಿಯೊಂದರ ಮುಂದೆ ಕುಳಿತಿರುವ ಯುವತಿಯರು ಮದ್ಯ ಕುಡಿಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ದೆಹಲಿಯ ಬೀದಿಯೊಂದರ ದೃಶ್ಯ ಎಂದು ಹಲವರು ತಮ್ಮ ಪೋಸ್ಟ್‌ಗಳಲ್ಲಿ ಹೇಳಿದ್ದಾರೆ. ‘ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಮದ್ಯಪಾನವನ್ನು ಉತ್ತೇಜಿಸುತ್ತಿದೆ. ತೆರಿಗೆ ಸಂಗ್ರಹ ಉದ್ದೇಶದಿಂದ ಸರ್ಕಾರ ತೆಗೆದುಕೊಂಡ ಕ್ರಮದಿಂದ ಯುವ ಜನರು ಮದ್ಯವ್ಯಸನಿಗಳಾಗಿದ್ದಾರೆ. ಯುವತಿಯರು ಬೀದಿಯಲ್ಲಿ ಕುಳಿತು ಮದ್ಯ ಕುಡಿಯುವ ಸ್ಥಿತಿ ದೆಹಲಿಗೆ ಬಂದೊದಗಿದೆ’ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ವಿಡಿಯೊ ಜತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಹಂಚಿಕೊಂಡಿರುವ ಮಾಹಿತಿ ಸತ್ಯಕ್ಕೆ ದೂರವಾದುದು’ ಎಂದು ದಿ ಲಾಜಿಕಲ್ ಇಂಡಿಯನ್ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ವಿಡಿಯೊ ಮೇಲೆ ‘Mr_thakur1612’ ಎಂಬ ವಾಟರ್‌ಮಾರ್ಕ್‌ ಇದೆ. ಈ ಯೂಸರ್‌ನೇಮ್‌ನಲ್ಲಿ ಇರುವ ಇನ್‌ಸ್ಟಾಗ್ರಾಂ ರೀಲ್ಸ್‌ ಖಾತೆಯಲ್ಲಿ ಇಂತಹ ಹಲವು ವಿಡಿಯೊಗಳನ್ನು ಹಂಚಿಕೊಳ್ಳಲಾಗಿದೆ. ಯುವತಿಯರು ಮದ್ಯಪಾನ ಮಾಡುತ್ತಿರುವ ವಿಡಿಯೊವನ್ನು ಒಂದು ಕಿರುಚಿತ್ರಕ್ಕಾಗಿ ಚಿತ್ರಿಸಲಾಗಿದೆ ಎಂದು ವಿಡಿಯೊ ವಿವರದಲ್ಲಿ ಮಾಹಿತಿ ನೀಡಲಾಗಿದೆ. ಮೂಲ ವಿಡಿಯೊ 7 ನಿಮಷಗಳಷ್ಟು ದೀರ್ಘವಾಗಿದೆ. ಆ ವಿಡಿಯೊವನ್ನು ತುಂಡರಿಸಿ 2 ನಿಮಿಷಗಳ ವಿಡಿಯೊವನ್ನು ಬಳಸಿಕೊಂಡು, ದೆಹಲಿ ಸರ್ಕಾರವನ್ನು ಅವಹೇಳನ ಮಾಡಲಾಗಿದೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT