ಗುರುವಾರ , ಮಾರ್ಚ್ 23, 2023
28 °C

ಫ್ಯಾಕ್ಟ್ ಚೆಕ್: ದಿಲೀಪ್ ಕುಮಾರ್ ತಮ್ಮ ಆಸ್ತಿಯನ್ನು ವಕ್ಫ್‌ ಮಂಡಳಿಗೆ ನೀಡಿದರೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ನ ಖ್ಯಾತ ನಟ, ಇತ್ತೀಚೆಗೆ ನಿಧನರಾದ ದಿಲೀಪ್ ಕುಮಾರ್ ಅವರು ತಮ್ಮ ಆಸ್ತಿಯನ್ನು ವಕ್ಫ್ ಮಂಡಳಿಗೆ ನೀಡಿದ್ದಾರೆ ಎಂಬ ಸುದ್ದಿ ಪ್ರಚಲಿತದಲ್ಲಿದೆ. ಟ್ವಿಟರ್ ಬಳಕೆದಾರರು ಈ ಮಾಹಿತಿಯನ್ನು ಹಂಚಿಕೊಂಡಿದ್ದು, ದಿಲೀಪ್ ಕುಮಾರ್ ಅವರ ಇಸ್ಲಾಂ ಮೂಲವೇ ಇದಕ್ಕೆ ಕಾರಣ ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ. ₹98 ಕೋಟಿ ದಾನ ನೀಡಿದ್ದಾರೆ ಎಂದು ಕೆಲವರು ಉಲ್ಲೇಖಿಸಿದ್ದಾರೆ. ದಿಲೀಪ್ ಕುಮಾರ್ ಅವರು ಪಾಕಿಸ್ತಾನದ ಪೆಶಾವರದ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದರು. ಅವರು ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾದರು.

ವಕ್ಫ್ ಮಂಡಳಿಗೆ ದಿಲೀಪ್ ಕುಮಾರ್ ದೇಣಿಗೆ ನೀಡಿದ ವಿಚಾರವನ್ನು ಅವರ ಮ್ಯಾನೇಜರ್ ಫೈಸಲ್ ಫಾರೂಕಿ ಅಲ್ಲಗಳೆದಿದ್ದಾರೆ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ಅವರ ಆಸ್ತಿ ಏನಿದ್ದರೂ ಅವರ ಪತ್ನಿ ಸಾಯಿರಾ ಬಾನು ಅವರಿಗೆ ಸೇರಿದ್ದು ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರ ವಕ್ಫ್ ಮಂಡಳಿ ಸಿಇಒ ಅನೀಸ್ ಶೇಖ್ ಅವರನ್ನು ಸಂಪರ್ಕಿಸಿದಾಗ, ದಿಲೀಪ್ ಕುಮಾರ್ ಅವರಿಂದ ಯಾವುದೇ ದೇಣಿಗೆ ಬಂದಿಲ್ಲ ಎಂದು ತಿಳಿಸಿದ್ಧಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು