ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check| ಮಹಿಳೆಯನ್ನು ಎಳೆದಾಡುತ್ತಿರುವ ವಿಡಿಯೊ ಜತೆ ತಿರುಚಿದ ಮಾಹಿತಿ

Last Updated 5 ಸೆಪ್ಟೆಂಬರ್ 2022, 18:31 IST
ಅಕ್ಷರ ಗಾತ್ರ

ಮಹಿಳೆಯೊಬ್ಬರನ್ನು ವ್ಯಕ್ತಿಯೊಬ್ಬ ಎಳೆದಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಹಿಳೆಯರು ಸೇರಿದಂತೆ ಇತರ ಕೆಲವರು ಮಹಿಳೆಯ ಕೂದಲು ಹಿಡಿದೆಳೆದು ಬಡಿಯುವ, ಒದೆಯುವ ದೃಶ್ಯಗಳೂ ವಿಡಿಯೊದಲ್ಲಿ ಇವೆ. ಇದು ಪಾಕಿಸ್ತಾನದಲ್ಲಿ ಹಿಂದೂ ಮಹಿಳೆಯನ್ನು ಥಳಿಸುತ್ತಿರುವ ದೃಶ್ಯ ಎಂದು ಹಲವರು ಹೇಳಿಕೊಂಡಿದ್ದಾರೆ. ‘ಜೀ ಹಿಂದುಸ್ಥಾನ್‌’ ಹೀಗೆ ಟ್ವೀಟ್‌ ಮಾಡಿದೆ: ‘ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರಿದಿದೆ’. ವಿಶ್ವ ಹಿಂದೂ ಪರಿಷತ್‌ನ ವಕ್ತಾರ ವಿನೋದ್ ಬನ್ಸಲ್‌ ಕೂಡ ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಅವರು ಹೀಗೆ ಹೇಳಿದ್ದಾರೆ: ‘ಅಫ್ಗಾನಿಸ್ತಾನವು ಹೆಣ್ಣು ಮಕ್ಕಳು ಕಲಿಯಲು ವಿದೇಶಕ್ಕೆ ಹೋಗುವುದನ್ನು ನಿಷೇಧಿಸಿದೆ. ಪಾಕಿಸ್ತಾನವು ಹಿಂದೂಗಳ ಮೇಲೆ ಕ್ರೂರ ದೌರ್ಜನ್ಯ ಎಸುಗತ್ತಿದೆ. ಜಿಹಾದಿಗಳ ಮಹಿಳಾ ವಿರೋಧಿ ಮನಸ್ಥಿತಿ ಬದಲಾಗಲು ಸಾಧ್ಯವೇ ಇಲ್ಲ’.

ವಿಡಿಯೊದ ಕುರಿತು ಇರುವ ವಿವರಣೆಯು ಸುಳ್ಳು ಎಂದು ಆಲ್ಟ್‌ ನ್ಯೂಸ್‌ ಹೇಳಿದೆ. ವಿಡಿಯೊ ಕುರಿತಂತೆ ಪರಿಶೀಲನೆ ನಡೆಸಿದಾಗ 2022ರ ಜನವರಿ 9ರಂದು ಪಾಕಿಸ್ತಾನದ ‘ಜಿಯೊ ನ್ಯೂಸ್‌’ನಲ್ಲಿ ಪ್ರಕಟವಾದ ವರದಿಯೊಂದು ಸಿಕ್ಕಿದೆ. ಭೂ ವಿವಾದಕ್ಕೆ ಸಂಬಂಧಿಸಿ ಸಿಯಾಲ್‌ಕೋಟ್‌ನಲ್ಲಿ ಮಹಿಳೆಯನ್ನು ಥಳಿಸಲಾಗಿದೆ ಎಂಬುದೇ ಆ ವರದಿ. ಈ ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 15 ಮಂದಿಯ ವಿರುದ್ಧ ದೂರು ದಾಖಲಾಗಿದೆ. 13 ವರ್ಷಗಳಿಂದ ಇದ್ದ ಭೂ ವ್ಯಾಜ್ಯಕ್ಕೆ ಸಂಬಂಧಿಸಿ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಮಹಿಳೆಯೇ ಜಿಯೊ ನ್ಯೂಸ್‌ಗೆ ಹೇಳಿದ್ದಾರೆ. ಈ ಘಟನೆಗೆ ಕೋಮು ಆಯಾಮ ಇದೆ ಎಂಬ ಯಾವುದೇ ಉಲ್ಲೇಖ ವರದಿಯಲ್ಲಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT