‘ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಉತ್ಖನನ ನಡೆಸುತ್ತಿದ್ದ ವೇಳೆ ಪುರಾತನ ಚಿತ್ರ ಮತ್ತು ಪತ್ರ ದೊರೆತಿವೆ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪೋಸ್ಟ್‌ನಲ್ಲಿ ಒಂದು ವಿಡಿಯೊವನ್ನು ಹಂಚಿಕೊಳ್ಳಲಾಗಿದೆ. ಸಿಲಿಂಡರ್ ಆಕಾರದ ಕ್ಯಾನ್ ಒಂದರಿಂದ ಸುರುಳಿ ಸುತ್ತಿರುವ ಬಟ್ಟೆಯನ್ನು ತೆಗೆದು, ಅದನ್ನು ಬಿಡಿಸಿಡುವ ದೃಶ್ಯ ವಿಡಿಯೊದಲ್ಲಿ ಇದೆ. ಪುರಾತನವಾದ ಆ ಬಟ್ಟೆಯ ಮೇಲೆ ಹಲವು ಚಿತ್ರಗಳು ಮತ್ತು ಬರಹ ಇದೆ.
‘ರಾಮ ಜನ್ಮಭೂಮಿ ಉತ್ಖನನದ ವೇಳೆ ಅಂತಹ ಯಾವುದೇ ಪತ್ರ, ಚಿತ್ರ ದೊರೆತಿಲ್ಲ ಎಂದು ಕೇಂದ್ರ ಸರ್ಕಾರವು ನೇಮಕ ಮಾಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ. ಹೀಗಾಗಿ ವೈರಲ್ ಆಗಿರುವ ವಿಡಿಯೊದಲ್ಲಿ ಇರುವ ಪತ್ರಕ್ಕೂ ರಾಮ ಮಂದಿರಕ್ಕೂ ಸಂಬಂಧವಿಲ್ಲ ಎಂಬುದು ಸಾಬೀತಾಗಿದೆ. ಈ ವಿಡಿಯೊವನ್ನು 2020ರ ಏಪ್ರಿಲ್‌ನಲ್ಲಿ ಟರ್ಕಿಯಲ್ಲಿನ ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಇದು ಯಹೂದಿಗಳಿಗೆ ಸಂಬಂಧಿಸಿದ ಪತ್ರ. ಆ ಪತ್ರದಲ್ಲಿರುವುದು ಹೀಬ್ರೂ ಭಾಷೆ’ ಎಂದು ದಿ ಲಾಜಿಕಲ್ ಇಂಡಿಯನ್ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.