ಸೈಯ್ಯದ್‌ ಆರೋಪ ಸುಳ್ಳು; ಶಫೀಕ್

ಮಂಗಳವಾರ, ಏಪ್ರಿಲ್ 23, 2019
31 °C

ಸೈಯ್ಯದ್‌ ಆರೋಪ ಸುಳ್ಳು; ಶಫೀಕ್

Published:
Updated:

ವಿಜಯಪುರ: ‘ನಮ್ಮ ದರ್ಗಾಕ್ಕೆ ಸಂಬಂಧಿಸಿದಂತೆ ಸೈಯ್ಯದ್‌ ಮಹಿಬೂಬಪಾಶಾ ಜಾಗೀರದಾರ ಮಾಡಿರುವ ಎಲ್ಲ ಆರೋಪಗಳು ಸುಳ್ಳು’ ಎಂದು ಶಫೀಕ್‌ ಅಹಮದ್‌ ಜಾಗೀರದಾರ ಹೇಳಿದರು.

‘ಸೈಯ್ಯದ್‌ ವಿರುದ್ಧ ಹಲವು ತೀರ್ಮಾನ ನ್ಯಾಯಾಲಯ, ವಕ್ಫ್‌ ಬೋರ್ಡ್‌ನಿಂದ ಹೊರಬಿದ್ದಿವೆ. ಆದರೂ ವಿನಾಃ ಕಾರಣ ಕಿರಿಕಿರಿ ಕೊಡಲೇಬೇಕು ಎಂದು ಸುಳ್ಳು ಆಪಾದನೆ ಮಾಡುತ್ತಿದ್ದಾರೆ’ ಎಂದು ಬುಧವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಹಾಸಿಂಪೀರಾ ತನ್ವೀರ್ ಹಾಶ್ಮಿ ಧರ್ಮಗುರು. ನಮ್ಮೊಟ್ಟಿಗೆ ಒಳ್ಳೆ ಬಾಂಧವ್ಯ ಹೊಂದಿದ್ದಾರೆ. ದರ್ಗಾದ ಜತೆಗೂ ನಂಟು ಹೊಂದಿದ್ದಾರೆ. ಯಾವುದೇ ಅಕ್ರಮ ನಮ್ಮಲ್ಲಿ ನಡೆದಿಲ್ಲ. ಎಲ್ಲವೂ ದಾಖಲೆಗಳಲ್ಲಿವೆ. ಜೀವ ಬೆದರಿಕೆ, ಹೊಡೆಯಲು ಬಂದಿದ್ದರು ಎಂಬುದೆಲ್ಲಾ ಸುಳ್ಳು. ಯಾರೂ ಬೇಕಾದರೂ ನಮ್ಮ ದರ್ಗಾದ ದಾಖಲೆ ಪರಿಶೀಲಿಸಬಹುದು’ ಎಂದು ಹೇಳಿದರು.

‘ಕೂಡಗಿ ದರ್ಗಾದ ಅಂಜುಮನ್‌ ಸಮಿತಿಗೂ ಇವರಿಗೂ ಸಂಬಂಧವೇ ಇಲ್ಲ. ಊರಿನ ಎಲ್ಲರೂ ಇವರ ವಿರುದ್ಧ ನಿಂತಿದ್ದಾರೆ. ಧರ್ಮಗುರುವಿನ ಮೇಲೆ ಮಾಡಿರುವ ಆಪಾದನೆ ಶುದ್ಧ ಸುಳ್ಳು’ ಎಂದು ಶಪೀಕ್ ಅಹಮದ್‌ ಜಾಗೀರದಾರ ಪುನರುಚ್ಚರಿಸಿದರು.

ದರ್ಗಾದ ಅಂಜುಮನ್ ಸಮಿತಿ ಅಧ್ಯಕ್ಷ ಕಾಶೀಮಸಾಬ್ ಕೊಡಗಾನೂರ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !