ಬೇಡಿಕೆ ಈಡೇರಿಕೆಗಾಗಿ ರೈತರಿಂದ ಉರುಳು ಸೇವೆ

7

ಬೇಡಿಕೆ ಈಡೇರಿಕೆಗಾಗಿ ರೈತರಿಂದ ಉರುಳು ಸೇವೆ

Published:
Updated:
Deccan Herald

ವಿಜಯಪುರ: ರೈತರ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಅನ್ನದಾತರು ಉರುಳು ಸೇವೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಸೇರಿದ ರೈತರು ಕೆಲಕಾಲ ಪ್ರತಿಭಟನೆ ನಡೆಸಿ, ನಂತರ ಉರುಳು ಸೇವೆ ಮಾಡುತ್ತಾ, ಬಸವೇಶ್ವರ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತ‌ದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಎಸ್‌.ಬಿ.ಶೆಟ್ಟೆಣ್ಣವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತ ಮುಖಂಡ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಭೀಕರ ಬರ ಆವರಿಸಿದ್ದು, ರೈತರು ಕಂಗಾಲಾಗಿದ್ದಾರೆ. ಹೊಟ್ಟೆ ತುಂಬಿಸಿಕೊಳ್ಳಲು ಪರದಾಟ ನಡೆಸಿದ್ದಾರೆ. ರೈತರ ನೆರವಿಗೆ ಬರಲು ಫಸಲ ಭೀಮಾ ಯೋಜನೆಯಡಿ ಜಿಲ್ಲೆಗೆ ₹ 105 ಕೋಟಿ ಬಿಡುಗಡೆಯಾಗಿದೆ. ಆದರೆ, ಬ್ಯಾಂಕಿನವರು ರೈತರಿಗೆ ಹಣ ನೀಡದೆ ಸಾಲದ ಖಾತೆಗೆ ಜಮಾ ಮಾಡಿಕೊಂಡು ಸತಾಯಿಸುತ್ತಿರುವುದು ಖಂಡನೀಯ ಎಂದರು.

ರೈತರಿಗೆ ವಿಮಾ ಹಣ ನೀಡಲು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು. ತೊಗರಿ ಖರೀದಿ ಕೇಂದ್ರ ತಕ್ಷಣ ಆರಂಭಿಸಬೇಕು. ಎಫ್.ಆರ್.ಪಿ ದರದಂತೆ ಕಬ್ಬಿಗೆ ಬೆಲೆ ನೀಡಬೇಕು. ಉಳ್ಳಾಗಡ್ಡಿ, ತೊಗರಿ, ಕಡಲೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ರೈತರು ಬೆಳೆದ ತರಕಾರಿ ಮಾರಾಟಕ್ಕೆ ವ್ಯವಸ್ಥಿತ ಮಾರುಕಟ್ಟೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ನಿಂಗರಾಜ ಆಲೂರ, ಬಸನಗೌಡ ಧರ್ಮಗೊಂಡ, ಸಿದ್ದಪ್ಪ ಇಂಗಳೇಶ್ವರ, ತಿರುಪತಿ ಬಂಡಿವಡ್ಡರ, ಬಾಪುಗೌಡ ಬಿರಾದಾರ, ಸಾಬಣ್ಣ ಅಂಗಡಿ, ಸಿದ್ದರಾಯ ಜಂಗಮಶೆಟ್ಟಿ, ದುಂಡಪ್ಪ ಕೊರಬು, ಗಿರೀಶ ಹಿರೇಮಠ, ಸಿದ್ದನಗೌಡ ಬಿರಾದಾರ, ಗುರುಗೌಡ ಬಿರಾದಾರ, ಶಿವಪ್ಪ ಪಾಟೀಲ, ಹಣಮಂತ ವಡ್ಡರ, ಸಿದ್ದಪ್ಪ ನಾಟಿಕಾರ, ಸುರೇಶ ವಡ್ಡರ, ಅರ್ಜುನ ಗೊಳಪ್ಪಗೋಳ, ಸುನೀಲಗೌಡ ಬಿರಾದಾರ, ಸಮೀರ್‌ ತೊರವಿ, ಮಹಿಬೂಬ್‌ ಟಕ್ಕೆ, ಸಂತೋಷ ಬಿರಾದಾರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !