ಚುನಾವಣೆ ಬಹಿಷ್ಕರಿಸಲು ರೈತರು ತೀರ್ಮಾನ

ಶನಿವಾರ, ಏಪ್ರಿಲ್ 20, 2019
31 °C
ಸುವರ್ಣಾವತಿ ಹಳೆಯ ಅಚ್ಚುಕಟ್ಟು ಪ್ರದೇಶ: ನೀರಿನ ಬೇಡಿಕೆ ಈಡೇರಿಸದ ಜಿಲ್ಲಾಡಳಿತ

ಚುನಾವಣೆ ಬಹಿಷ್ಕರಿಸಲು ರೈತರು ತೀರ್ಮಾನ

Published:
Updated:
Prajavani

ಚಾಮರಾಜನಗರ: ತಾಲ್ಲೂಕಿನ ಆಲೂರು ಭಾಗದ ಸುವರ್ಣಾವತಿ ಅಚ್ಚುಕಟ್ಟು ಪ್ರದೇಶಕ್ಕೆ ಸುವರ್ಣಾವತಿ ಜಲಾಶಯದಿಂದ ಜಿಲ್ಲಾಡಳಿತ ನೀರು ಹರಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.

ಆಲೂರು ಗ್ರಾಮದ ಹಳೆ ಬಸ್‌ ನಿಲ್ದಾಣದಲ್ಲಿ ಗುರುವಾರ ನಡೆದ ಸುವರ್ಣಾವತಿ ಹಳೆಯ ಅಚ್ಚುಕಟ್ಟುದಾರರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ನೀರು ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಪ್ರಯೋಜನವಾಗಿಲ್ಲ. ಹಳೇ ಆಲೂರು ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ವಾರ ನಡೆದ ಅಚ್ಚುಕಟ್ಟುದಾರ ಸಭೆಯಲ್ಲಿ ಸುವರ್ಣಾವತಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್‌  ರಾಜೇಂದ್ರ ಪ್ರಸಾದ್‌ ಅವರು ಅಚ್ಚುಕಟ್ಟು ಪ್ರದೇಶ ಜಮೀನುಗಳಿಗೆ ನೀರು ಹರಿಸುವ ಭರವಸೆ ನೀಡಿದ್ದರು. ಅದು ಹುಸಿಯಾಗಿದೆ. ಬರೀ ಸುಳ್ಳು ಆಶ್ವಾಸನೆ ಕೊಡುವ ಮೂಲಕ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಆರೋಪಿಸಿದರು.

‘ಇದುವರೆಗೆ ವರ್ಷಕ್ಕೆ ಎರಡು–ಮೂರು ಸಲ ನೀರು ಹರಿಸಲಾಗುತ್ತಿತ್ತು. ಈ ವರ್ಷ ಒಂದು ಬಾರಿಯೂ ನೀರು ಬಿಟ್ಟಿಲ್ಲ.  ಬಿಸಿಲಿಗೆ ತೆಂಗಿನ ತೋಟ ಬಾಡುತ್ತಿದೆ. ಕೆಲವು ಕಡೆ ತೆಂಗಿನ ಮರ ಒಣಗಲು ಆರಂಭವಾಗಿದೆ. ಇತರ ಬೆಳೆಗಳು ಒಣಗಿ ಹೋಗಿವೆ. ರೈತರು ಸಂಕಷ್ಟದಲ್ಲಿದೆ. ಕೂಡಲೇ ಜಿಲ್ಲಾಡಳಿತ ಈ ಭಾಗಕ್ಕೆ ನೀರು ಹರಿಸಬೇಕು. ಇಲ್ಲದಿದ್ದರೆ ಇದೇ 18ರಂದು ಮತದಾನ ಬಹಿಷ್ಕರಿಸುತ್ತೇವೆ’ ಎಂದು ರೈತರಾದ ಎ.ಎಂ.ಮಹೇಶ್‌ಪ್ರಭು, ಆಲೂರು ಮಲ್ಲು, ಎ.ಎಸ್.ಚೆನ್ನಬಸಪ್ಪ ಹೇಳಿದರು.

ಗೌಡಿಕೆ ನಾಗರಾಜು, ಪಟೇಲ್‌ ಬಸವರಾಜು, ನಂದೀಶ್, ಸುಂದರ್‌ರಾಜ್, ಜಯಣ್ಣ, ಪರಶಿವಪ್ಪ, ಬಸವಣ್ಣ, ಲೋಕೇಶ್, ರವಿ, ಜೀತೇಂದ್ರ, ಶಿವರುದ್ರಸ್ವಾಮಿ, ನಾಗರಾಜು, ನಾಗೇಂದ್ರಸ್ವಾಮಿ ಸೇರಿದಂತೆ 100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !