ನೀರು ಹರಿಸದ್ದಿದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆ

ಮಂಗಳವಾರ, ಏಪ್ರಿಲ್ 23, 2019
31 °C
ನೀರು ಹರಿಸುವ ಭರವಸೆ ನೀಡಿದ ಅಧಿಕಾರಿಗಳು

ನೀರು ಹರಿಸದ್ದಿದರೆ ಚುನಾವಣೆ ಬಹಿಷ್ಕಾರ: ಎಚ್ಚರಿಕೆ

Published:
Updated:
Prajavani

ಚಾಮರಾಜನಗರ: ಸುವರ್ಣಾವತಿ ಹಳೆಯ ಅಚ್ಚುಕಟ್ಟು ಪ್ರದೇಶದ ಕೃಷಿ ಜಮೀನುಗಳಿಗೆ ಸುವರ್ಣಾವತಿ ಜಲಾಶಯದಿಂದ ತಕ್ಷಣ ನೀರು ಹರಿಸದಿದ್ದರೆ ಏಪ್ರಿಲ್‌ 18ರಂದು ನಡೆಯುವ ಲೋಕಸಭಾ ಚುನಾವಣೆ ಬಹಿಷ್ಕರಿಸಲು ಈ ಭಾಗದ ರೈತರು ನಿರ್ಣಯ ಕೈಗೊಂಡಿದ್ದಾರೆ.

ತಾಲ್ಲೂಕಿನ ಹಳೆ ಆಲೂರಿನ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಸಭೆ ಸೇರಿದ್ದ ರೈತ ಮುಖಂಡರು ಹಾಗೂ ಗ್ರಾಮಸ್ಥರು ‘ನೀರಿಲ್ಲದೆ, ತೆಂಗಿನ ತೋಟ ಹಾಗೂ ಇತರ ಬೆಳೆಗಳು ಒಣಗಿದ್ದು, ಸಾಯುವ ಹಂತ ತಲುಪಿವೆ. ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳಿಗೆ ಹಾಗೂ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ಮನವಿ ಮಾಡಿದ್ದರೂ ಸುವರ್ಣಾವತಿ ಜಲಾಶಯದಿಂದ ನೀರು ಬಿಡುಗಡೆ ಮಾಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಸುವರ್ಣಾವತಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್‌ ರಾಜೇಂದ್ರ ಪ್ರಸಾದ್‌, ಸಹಾಯಕ ಕಾರ್ಯಪಾಲರ ಎಂಜಿನಿಯರ್‌ ರವೀಶ್‌, ಸಹಾಯಕ ಎಂಜಿನಿಯರ್‌ ಮಹೇಶ್ ಕೂಡ ಇದ್ದರು.

ರೈತರು ನೀರು ಬಿಡದಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. 

ರಾಜೇಂದ್ರ ಪ್ರಸಾದ್‌ ಮಾತನಾಡಿ, ‘ರೈತರ ಬೇಡಿಕೆಯಂತೆ ತಕ್ಷಣದಿಂದಲೇ ಎಲ್ಲ ರೈತರ ಜಮೀನುಗಳಿಗೆ ನೀರು ಹರಿಸುತ್ತೇವೆ’ ಎಂದು ಭರವಸೆ ನೀಡಿದರು. ಸರಗೂರುಮೋಳೆ, ಕೂಡ್ಲೂರು, ಕರಿಯನಕಟ್ಟೆ, ಹೊಮ್ಮ, ಕೋಟಂಬಳ್ಳಿ, ಮಲ್ಲೂಪುರ, ಹಂಡ್ರಕಳ್ಳಿಮೋಳೆ, ಕಣ್ಣೇಗಾಲ, ಬೂದಿತಿಟ್ಟು, ಲಿಂಗರಾಜಪುರ ಗ್ರಾಮಗಳ ಅಚ್ಚುಗಟ್ಟು ಪ್ರದೇಶ ರೈತರು ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !