ಮುದ್ದು ಮಕ್ಕಳ ಫ್ಯಾಷನ್‌ ಮೋಡಿ...

7
FASHION

ಮುದ್ದು ಮಕ್ಕಳ ಫ್ಯಾಷನ್‌ ಮೋಡಿ...

Published:
Updated:
Deccan Herald

ಮುದ್ದು ಮುಖ ಹೊತ್ತು, ಪುಟ್ಟ ಪುಟ್ಟ ಹೆಜ್ಜೆಹಾಕುತ್ತ, ತೊದಲು ನುಡಿಯುವ ಕಂದಮ್ಮಗಳಿಗೆ ತುಟಿ ಮೇಲಿನ ನಗು, ಕಂಗಳಲ್ಲಿನ ಮುಗ್ಧತೆಯೇ ಆಭರಣ. ಆದಾಗ್ಯೂ ಕುಲಾವಿಗಳಿಂದ ಹಿಡಿದು ಕಾಲುಚೀಲದವರೆಗೂ ಬಹು ವಿನ್ಯಾಸದ ವಸ್ತ್ರಗಳಿಂದ ಮಕ್ಕಳನ್ನು ಸಿಂಗರಿಸಿ ಮುಗ್ಧ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದೆಂದರೇ ಅದೇನೊ ಖುಷಿ.

ಸದ್ಯ ರಶ್ಮಿ ಮತ್ತು ಪಾಯಲ್ ಅವರು ತಮ್ಮ ‘ಲಿಲ್‌ ಸ್ಟೈಲ್‌ ಸ್ಟುಡಿಯೊ’ ಮುಖೇನ ಮಕ್ಕಳನ್ನು ಶೃಂಗರಿಸ ಬಯಸುವ ಪೋಷಕರ ಬಯಕೆಗೆ ಅನೇಕ ಆಯ್ಕೆಗಳನ್ನು ನೀಡಿದ್ದಾರೆ. ಪಾರ್ಟಿಯಂತಹ ಸಮಾರಂಭಗಳಿಗೆ ಪಾಶ್ಚಾತ್ಯ ಉಡುಗೆಗಳು, ಮದುವೆಯಂತಹ ಸಮಾರಂಭಗಳಿಗೆ ಸಾಂಪ್ರದಾಯಿಕ ತೊಡುಗೆಗಳು, ನಿತ್ಯದ ಬಳಕೆಗೆ ಕ್ಯಾಷುವಲ್‌ ವೇರ್, ‘ಸೇಮ್‌ ಟು ಯೂ’ ಎನ್ನುವ ಟ್ವಿನ್ನಿಂಗ್‌ ವಸ್ತ್ರಗಳು ಹೀಗೆ ಮಗುವನ್ನು ಅಡಿಯಿಂದ ಮುಡಿವರೆಗೆ ಶೃಂಗರಿಸುವ ಎಲ್ಲ ಸೌಂದರ್ಯ ಸಾಧನಗಳು ಇಲ್ಲಿ ಲಭ್ಯ.

ಮುಂಬೈ, ಕೋಲ್ಕತ್ತ, ದೆಹಲಿ, ಹೈದರಾಬಾದ್‌, ಪುಣೆ ಸೇರಿದಂತೆ ದೇಶದ ವಿವಿಧ 70 ವಿನ್ಯಾಸಕರು ವಿನ್ಯಾಸ ಮಾಡಿರುವ ಶರಾರ, ಜೆಮ್‌ಸೂಟ್ಸ್‌, ಗೌನ್ಸ್‌, ಫ್ರಾಕ್ಸ್‌, ಕುರ್ತಾ, ಪಟಿಯಾಲ, ಪೈಜಾಮ, ಶರ್ಟ್‌, ಟಿ ಶರ್ಟ್‌ಗಳು ದೊರೆಯುತ್ತವೆ. 16 ವರ್ಷದೊಳಗಿನ ಹೆಣ್ಣು ಮಕ್ಕಳು ಹಾಗೂ 7 ವರ್ಷದವರೆಗಿ‌ನ ಗಂಡು ಮಕ್ಕಳ ವಸ್ತ್ರಗಳಿವೆ.

ಇನ್ನೂ ಅಮ್ಮ– ಮಕ್ಕಳು, ಅಪ್ಪ– ಮಕ್ಕಳು, ಸಹೋದರ– ಸಹೋದರಿ ಹೀಗೆ ಇಬ್ಬರು ಒಂದೇ ಬಗೆಯ ಟ್ವಿನ್ನಿಂಗ್‌ ಉಡುಪು ಧರಿಸಬೇಕು ಎಂದು ಬಯಸುವವರಿಗೂ ಇಲ್ಲಿ ಆಯ್ಕೆಗಳಿವೆ. ಆದರೆ ಇದನ್ನು ಮೊದಲೇ ಆರ್ಡರ್‌ ನೀಡಿ ನಮಗೆ ಬೇಕಾದ ಹಾಗೆ ವಿನ್ಯಾಸ ಮಾಡಿಕೊಳ್ಳಬೇಕು.

ಕಾಟನ್‌, ರೇಷ್ಮೆ, ನೈಲಾನ್‌, ಖಾದಿ ಯಾವ ಬಟ್ಟೆಯಲ್ಲಾದರೂ, ನಮ್ಮಿಷ್ಟದ ಬಣ್ಣದಿಂದ, ಇಷ್ಟದ ವಿನ್ಯಾಸಕರಿಂದ ವಿನ್ಯಾಸ ಮಾಡಿಸಿ ಧರಿಸಬಹುದು.

ವೃತ್ತಿಯಲ್ಲಿ ಒಳಾಂಗಣ ವಿನ್ಯಾಸಕಿಯಾಗಿರುವ ರಶ್ಮಿ, ಫ್ಯಾಷನ್‌ ಕ್ಷೇತ್ರದ ಒಲವು ತೋರಲು ಅನಿವಾರ್ಯತೆಯೇ ಕಾರಣವಂತೆ. ‘ಮನೆಯಲ್ಲಿ ನಡೆಯಬೇಕಿದ್ದ ಮದುವೆ ಸಮಾರಂಭವೊಂದಕ್ಕೆ ಮಕ್ಕಳಿಗೆ ಬಟ್ಟೆಗಳ ಆಯ್ಕೆ ಕಷ್ಟವಾಯಿತು. ಆನ್‌ಲೈನ್‌ನಲ್ಲಿನ ಆಕರ್ಷಕ ವಿನ್ಯಾಸಗಳು ನಗರದ ಯಾವ ಮಳಿಗೆಯಲ್ಲಿಯೂ ದೊರೆಯಲಿಲ್ಲ. ಆಗ ಹೊಳೆದಿದ್ದೆ ‘ಲಿಲ್‌ ಸ್ಟೈಲ್‌ ಸ್ಟೂಡಿಯೊ’ ಎನ್ನುತ್ತಾರೆ ರಶ್ಮಿ. 

‘ಆನ್‌ಲೈನ್‌ ಶಾಪಿಂಗ್‌ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇಲ್ಲ. ಇನ್ನೂ ಕೆಲವರಿಗೆ ಮಾಹಿತಿ ಇದ್ದರೂ ನಂಬಿಕೆ ಇಲ್ಲ. ಮುಟ್ಟಿ ನೋಡದೆ, ತೊಟ್ಟು ನೋಡದೆ ಖರೀದಿಸುವುದು ಹೇಗೆ ಎಂದು ಯೋಚಿಸುತ್ತಾರೆ. ಬಟ್ಟೆಗಳ ಗುಣಮಟ್ಟದ ಬಗ್ಗೆ ಸಹಜವಾಗಿಯೇ ಗೊಂದಲಗಳಿರುತ್ತವೆ. ಈ ಗೊಂದಲಗಳಿಗೆ ಪರಿಹಾರ ಎಂಬಂತೆ ‘ಟಚ್‌ ಅ್ಯಂಡ್‌ ಫೀಲ್‌’ ಎಂಬ ಥೀಮ್‌ನಲ್ಲಿಯೇ ಲಿಲ್‌ ಸ್ಟೈಲ್‌ ಸ್ಟುಡಿಯೊ ಆರಂಭಿಸಿದ್ದೇವೆ. ಇಲ್ಲಿ ಆನ್‌ಲೈನ್‌ ಬೆಲೆಯಲ್ಲಿಯೇ ಅದೇ ವಿನ್ಯಾಸಗಳನ್ನು ಆದರೆ, ಮುಟ್ಟಿ ನೋಡಿ, ತೊಟ್ಟು ನೋಡಿ ನಂತರ ಖರೀದಿಸಬಹುದು’ ಎನ್ನುವುದು ರಶ್ಮಿ ಅವರ ಅಭಿಪ್ರಾಯ.

70ಕ್ಕೂ ಹೆಚ್ಚು ವಿನ್ಯಾಸಕರ ಉಡುಪುಗಳ ಮಾತ್ರವಲ್ಲದೆ, ಅದಕ್ಕೊಪ್ಪುವ, ಹೇರ್‌ಬೆಂಡ್‌, ಚಪ್ಪಲಿ, ಶೂಗಳು, ಫ್ಯಾನ್ಸಿ ಬ್ಯಾಗ್, ಬಳೆ, ಸರ, ಕನ್ನಡಕಗಳು ಲಭ್ಯ. ವಸ್ತ್ರಗಳ ಬೆಲೆ ₹ 700 ರಿಂದ ಆರಂಭವಾಗಿ ₹12,000 ವರೆಗೂ ಇದೆ. ‘ಟಿಬೊಟ್ಯಾಬರ್’, ‘ಪಿಎನ್‌ಎಸ್‌’ ಬ್ರ್ಯಾಂಡ್‌ನ ಸಾಂಪ್ರದಾಯಿಕ ತೊಡುಗೆಗಳು, ‘ಮಿಲ್ಕ್‌ಟೀತ್‌’ ಬ್ರ್ಯಾಂಡ್‌ನ ಕ್ಯಾಷುವಲ್‌ ವೇರ್ಸ್‌, ಫಾರೆವರ್ ಕಿಡ್ಸ್‌ ಸೇರಿದಂತೆ ವಿವಿಧ ಜನಪ್ರಿಯ ಬ್ರ್ಯಾಂಡ್‌ನ ಉಡುಗೆಗಳು ಇಲ್ಲಿ ದೊರೆಯುತ್ತವೆ.

‘ಗಾಂಧಿ ಬಜಾರ್, ಕಮರ್ಷಿಯಲ್‌ ಸ್ಟ್ರೀಟ್‌ಗಳಲ್ಲಿ ವಿವಿಧ ಪ್ರದರ್ಶನಗಳಲ್ಲಿ ನಮ್ಮ ಸಂಗ್ರಹಗಳನ್ನು ಪ್ರದರ್ಶನ ಮಾಡಿದ್ದೇವೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ವಿವಿಧೆಡೆಗಳಲ್ಲಿ ಮಕ್ಕಳ ಉಡುಪುಗಳ ಸ್ಟುಡಿಯೊ ಆರಂಭಿಸಿ, ಬೆಂಗಳೂರಿಗೆ ಮಕ್ಕಳ ಫ್ಯಾಷನ್‌ ಲೋಕದಲ್ಲೊಂದು ಅಸ್ಮಿತೆ ಮೂಡಿಸಬೇಕು’ ಎನ್ನುವ ಹಂಬಲ ವ್ಯಕ್ತಪಡಿಸುತ್ತಾರೆ ರಶ್ಮಿ.

**

ವಿಳಾಸ: ಲಿಲ್‌ ಸ್ಟೈಲ್‌ ಸ್ಟುಡಿಯೊ, ದಿ ಕೋರ್ಟ್‌ಯಾರ್ಡ್‌, 105 ಕೆ.ಎಚ್‌.ರಸ್ತೆ, ಕಾರ್ಪೊರೇಷನ್‌ ಬ್ಯಾಂಕ್‌ ಮುಂಭಾಗ, ಶಾಂತಿನಗರ, ಬೆಂಗಳೂರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !