ಪ್ರೇಮಹಬ್ಬಕ್ಕೆ ವಿಶೇಷ ಉಡುಪು

ಪ್ರೇಮಿಗಳ ಹಬ್ಬದಂದು ಪ್ರಿಯಕರನನ್ನು ಮೆಚ್ಚಿಸಲು ಯಾವ ರೀತಿಯ ಬಟ್ಟೆ ಧರಿಸಲಿ.. ಎನ್ನುವ ಪ್ರೇಯಸಿಯ ಪ್ರೇಮಕಾಳಜಿಗೆ ಇಲ್ಲೊಂದಿಷ್ಟು ಟಿಪ್ಸ್. ಪ್ರಸಿದ್ಧ ಬ್ರ್ಯಾಂಡ್ ಕಂಪನಿಯಾದ ವೂನಿಕ್, ಪ್ರೇಮಹಬ್ಬಕ್ಕೆಂದೇ ವಿಶೇಷ ಉಡುಪುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ವಿವಿಧ ವಿನ್ಯಾಸ ಹಾಗೂ ವಿವಿಧ ಬಣ್ಣಗಳಲ್ಲಿ ಮನಮೋಹಕವಾಗಿ ಸಿದ್ಧಪಡಿಸಿರುವ ಉಡುಪುಗಳನ್ನು ವೂನಿಕ್ ಪರಿಚಯಿಸಿದೆ. ಕಪ್ಪು, ಕೆಂಪು, ಪಿಂಕ್, ಬಿಳಿ, ಚರ್ರಿ ಬಣ್ಣದಲ್ಲಿ ವಸ್ತ್ರವೈವಿಧ್ಯವಿದೆ. ಈ ಬಣ್ಣಗಳ ಪೈಕಿ ಯಾವ ಬಣ್ಣದ ಬಟ್ಟೆಗಳನ್ನು ಧರಿಸಲಿ ಎಂದು ಗೊಂದಲಕ್ಕೆ ಸಿಲುಕುವುದು ಸಹಜ. ಹೀಗಾಗಿಯೇ ವೂನಿಕ್ ಸಂಸ್ಥೆಯು ಪ್ರೇಮಿಗಳ ಹಬ್ಬದ ಸಲುವಾಗಿಯೇ ಫೆ 10ರವರೆಗೆ ’ಹಾರ್ಟ್ ಟು ಹಾರ್ಟ್‘ ವಿಶೇಷ ಮಾರಾಟ ಕಾರ್ಯಕ್ರಮ ಹಮ್ಮಿಕೊಂಡಿದೆ.
ಮಹಿಳೆಯರು ಹಾಗೂ ತರುಣಿಯರಿಗಾಗಿ ಡ್ರೆಸೆಸ್, ಲಾಂಜ್ ವಿಯರ್, ಜಂಪ್ ಸ್ಯೂಟ್ಸ್, ಆಭರಣಗಳು ಹಾಗೂ ರಾತ್ರಿ ಧರಿಸುವ ಉಡುಪುಗಳು ಮಾರಾಟಕ್ಕೆ ಲಭ್ಯವಿದ್ದು, ಅವುಗಳ ಮೇಲೆ ವಿಶೇಷ ರಿಯಾಯಿತಿಯೂ ಇದೆ. ಈ ವಿಶೇಷ ಕೊಡುಗೆಯು ವೂನಿಕ್ ನ ಎಲ್ಲ ಮಳಿಗೆಗಳಲ್ಲೂ ಚಾಲ್ತಿಯಲ್ಲಿದೆ.
‘ವೂನಿಕ್' ಸ್ಟೈಲಿಸ್ಟ್ ಭವ್ಯಾ ಚಾವ್ಲಾ ಟಿಪ್ಸ್
ಜಂಪ್ ಶೂಟ್ಸ್ ಮತ್ತು ಪ್ಲೇ ಶೂಟ್ಸ್: ವ್ಯಾಲೆಂಟೇನ್ಸ್ ಡೇ ಸ್ಪೆಷಲ್ ಹಾಗೂ ಟ್ರೆಂಡಿ ಲುಕ್ ಗಾಗಿ ಕಡು ಕೆಂಪು ಬಣ್ಣದ ಜಂಪ್ ಶೂಟ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಇದಕ್ಕೆ ಕ್ಲಚ್ ಇರುವ ಅಥವಾ ಉದ್ದನೆಯ ಬ್ಯಾಗ್ ಜೊತೆಗೆ ಎತ್ತರದ ಚಪ್ಪಲಿ (ಹೀಲ್ಸ್) ಧರಿಸಿದರೆ ಪ್ರಶಸ್ತ ಲುಕ್ ಸಿಗುತ್ತದೆ. ಇನ್ನು ಕ್ಯಾಶುವಲ್ ಅಥವಾ ಪಬ್ ಹಾಪಿಂಗ್ ಲುಕ್ ಬಯಸುವವರಿಗೆ ಜಂಪ್ ಶೂಟ್ಸ್ ಮತ್ತು ಪ್ಲೇ ಶೂಟ್ಸ್ನಲ್ಲಿ ಶಾರ್ಟ್ ವರ್ಶನ್ ದಿರಿಸನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಶಾರ್ಟ್ ವರ್ಶನ್ಗೆ ನೀವು ಪ್ಲಾನ್ ಮಾಡಿದ ಸ್ಥಳಕ್ಕೆ ಅನುಗುಣವಾಗಿ ಹೀಲ್ಸ್ ಅಥವಾ ಫ್ಲ್ಯಾಟ್ ಚಪ್ಪಲಿಗಳನ್ನು ಆಯ್ಕೆ ಮಾಡಿಕೊಂಡರೆ ಇನ್ನೂ ಉತ್ತಮ. ಬೆಲೆ: ₹ 1899
ಕ್ಯಾಶುವಲ್ ಲುಕ್ ವಿತ್ ಬಟರ್ ಫ್ಲೈ ಸ್ಲೀವ್ಸ್: ನಿಮ್ಮ ಪ್ರೀತಿ ಪಾತ್ರರೊಂದಿಗೆ ಸುಂದರವಾದ ದಿನ ಕಳೆಯಲು, ಸಂತೋಷದಿಂದ ಊಟ ಸವಿಯಲು ಮೇಲಿರುವ ಉಡುಗೆ ಇಷ್ಟವಾಗದಿದ್ದಲ್ಲಿ, ಬಟರ್ ಫ್ಲೈ ಸ್ಲೀವ್ಸ್ ಟ್ರೈ ಮಾಡಿ. ಇದು ನಿಮ್ಮನ್ನ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಇನ್ನು ಗಾಢ ಕೆಂಪು ಬಣ್ಣದ ಬಟರ್ ಫ್ಲೈ ಸ್ಲೀವ್ಸ್ ಬಟ್ಟೆ ತೊಟ್ಟರೆ ಗುಂಪಿನಲ್ಲಿದ್ದಾಗ ನಿಮಗೆ ಎದ್ದುಕಾಣುವಂತಹ ಲುಕ್ ಸಿಗುತ್ತದೆ. ಬೆಲೆ: ₹ 799
ಫಾರ್ಮಲ್ ಮ್ಯಾಕ್ಸಿ ಡ್ರೆಸ್: ನೀವು ವ್ಯಾಲೆಂಟೇನ್ಸ್ ಡೇ ಪಾರ್ಟಿಗೆ ಹೋಗಬೇಕಿದ್ದರೆ ಫಾರ್ಮಲ್ ಮ್ಯಾಕ್ಸಿ ಡ್ರೆಸ್ ಆಯ್ಕೆ ಮಾಡಿಕೊಳ್ಳಿ. ಇದು ಪಾರ್ಟಿಯಲ್ಲಿ ಎಲ್ಲರ ನೋಟ ನಿಮ್ಮತ್ತ ಬೀರುವಂತೆ ಮಾಡುತ್ತದೆ. ಈ ಡ್ರೆಸ್ ಜೊತೆಗೆ ಸಿಂಪಲ್ ಆದ ಒಡವೆಗಳನ್ನು ಧರಿಸಿ, ಎತ್ತರದ ಸ್ಲಿಪ್ಪರ್ ಹಾಕಿದ್ರೆ ನಿಮಗೆ ಪ್ರಶಸ್ತ ಲುಕ್ ಸಿಗುತ್ತದೆ. ಬೆಲೆ: ₹ 799
ಪಿಂಕ್ ಲೇಸ್ ಡ್ರೆಸ್: ಬ್ಲಶ್ ಟೋನ್ ಈಗಿನ ಲೇಟೆಸ್ಟ್ ಟ್ರೆಂಡ್. ಆದರೆ, ನಿಮ್ಮ ಸುಂದರವಾದ ದಿನ ಹಾಗೂ ನಿಮ್ಮ ಪ್ರೀತಿ ಪಾತ್ರರೊಂದಿಗೆ ಟೀ ಸವಿಯಲು ಹೊರಗಡೆ ಹೋಗುವಾಗ ಪಿಂಕ್ ಡ್ರೆಸ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಇನ್ನು ಈ ಪ್ರೇಮಿಗಳ ದಿನಕ್ಕೆ ಪಿಂಕ್ ಲೇಸ್ ಡ್ರೆಸ್ ಇರದಿದ್ದರೆ ಸುಂದರವಾದ ನೋಟ ಸಿಗುವುದಿಲ್ಲ. ಹೀಗಾಗಿ, ಪಿಂಕ್ ಮಿಶ್ರಿತ ಉಡುಪು ಉತ್ತಮ ಆಯ್ಕೆ. ಇನ್ನು ವ್ಯಾಲೆಂಟೇನ್ಸ್ ಡೇ ಪಾರ್ಟಿಯಲ್ಲಿ ಈ ಉಡುಗೆಯಲ್ಲಿ ಇನ್ನಷ್ಟು ಸುಂದರವಾಗಿ ಕಾಣಲು ಬೆಳ್ಳಿ ಅಥವಾ ಬಂಗಾರಬಣ್ಣದ ಬೆಲ್ಟ್ ಧರಿಸುವುದು ಸೂಕ್ತ. ಬೆಲೆ: ₹ 2921
ಸ್ಟೇಟ್ಮೆಂಟ್ ಟೀಸ್ ಅಥವಾ ಟಾಪ್ಸ್: ಸಂಪೂರ್ಣ ಕೆಂಪು ಉಡುಗೆ ಅಥವಾ ಗುಲಾಬಿ ಬಣ್ಣದ ಸ್ಕರ್ಟ್ ನಿಮಗೆ ಇಷ್ಟವಾಗದಿದ್ದರೆ ನಿಮ್ಮ ದಿನವನ್ನ ಸುಂದರವಾಗಿಸಲು ಇನ್ನಷ್ಟು ಉತ್ತಮ ಆಯ್ಕೆಗಳು ಸಾಕಷ್ಟಿವೆ. ಹೆಚ್ಚು ಸುಂದರವಾಗಿ ಕಾಣಬೇಕೆಂಬ ಆಸೆ ಇದ್ದರೆ ನಿಮ್ಮ ಉಡುಗೆಯ ಮೇಲೆ ಹೃದಯದ ಚಿಹ್ನೆ (ಹಾರ್ಟ್ ಸಿಂಬಲ್) ಅಥವಾ ಘೊಷಣೆ ಇರುವ ಹಲವು ಸುಂದರ ಉಡುಗೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಡ್ರೆಸ್ಗೆ ನಿಮ್ಮ ಪಾದರಕ್ಷೆಗಳು ವಿಶೇಷ ಎನಿಸುವ ರೀತಿಯಲ್ಲಿದ್ದರೆ ಉತ್ತಮ. ಬೆಲೆ: ₹ 799
ಬರಹ ಇಷ್ಟವಾಯಿತೆ?
0
0
0
0
0
0 comments
View All