ಸುಮಲತಾ ಗೆಲುವು ಮಹಿಳೆಯರಿಗೆ ಸ್ಫೂರ್ತಿ

ಸೋಮವಾರ, ಜೂನ್ 17, 2019
28 °C

ಸುಮಲತಾ ಗೆಲುವು ಮಹಿಳೆಯರಿಗೆ ಸ್ಫೂರ್ತಿ

Published:
Updated:
Prajavani

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಸಾಧಿಸಿರುವ ಗೆಲುವು ಎಲ್ಲರ ಗಮನ ಸೆಳೆದಿದೆ. ಪಕ್ಷೇತರರಾಗಿ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಲಿರುವ ಕರ್ನಾಟಕದ ಮೊದಲ ಮಹಿಳೆ ಎಂಬ ಹಿರಿಮೆ ಕೂಡ  ಅವರಿಗೆ ಸಂದಿದೆ. ಈ ಹೊತ್ತಿನಲ್ಲಿ ತಾರಾ ಅವರು ಸುಮಲತಾ ಗೆಲುವಿನ ಕುರಿತು ಹೇಳುವುದೇನು? ಅವರ ಜೊತೆಗಿನ ಮಾತುಕತೆಯ ಆಯ್ದ ಭಾಗ

* ಸಿನಿಮಾ ರಂಗದ ಮಹಿಳೆ ಗೆದ್ದಿರುವುದು ಸಿನಿಮಾ ಲೋಕದ ಇತರ ಹೆಣ್ಣುಮಕ್ಕಳಿಗೆ ಯಾವ ಸಂದೇಶ ನೀಡುವಂತಿದೆ?

ಸುಮಲತಾ (ತಾರಾ ಮಾತುಗಳಲ್ಲಿ ‘ಸುಮಮ್ಮ’) ಅವರು ಮೊದಲು ಕಾಂಗ್ರೆಸ್ಸಿನಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಅವರಿಗೆ ಆ ಅವಕಾಶ ಸಿಗಲಿಲ್ಲ. ಹಾಗಾಗಿ ಪಕ್ಷೇತರರಾಗಿ ಕಣಕ್ಕಿಳಿದರು. ನಾನು ಕೂಡ ಸಿನಿಮಾ ರಂಗದಲ್ಲೇ ಇರುವವಳಾದ ಕಾರಣ, ನಮ್ಮ ಕ್ಷೇತ್ರದ ಯಾರೇ ಗೆದ್ದರೂ ಖಂಡಿತ ಖುಷಿ ಆಗುತ್ತದೆ. ಸುಮಲತಾ ಗೆಲುವು ಎಲ್ಲ ಹೆಣ್ಣುಮಕ್ಕಳಿಗೆ ಭರವಸೆ ಕೊಡುವ ಸಂಗತಿ. ಇವರ ಗೆಲುವು ಮಾತ್ರವೇ ಅಲ್ಲ, ಯಾವುದೇ ಮಹಿಳೆಯ ಗೆಲುವು ಇನ್ನೊಬ್ಬಳಿಗೆ ಸ್ಫೂರ್ತಿ.

* ಸಿನಿಮಾ ರಂಗಕ್ಕಾಗಿ ಯಾವ ಕೆಲಸ ಮಾಡುವ ಅವಕಾಶ ಸುಮಲತಾ ಅವರಿಗಿದೆ?

ಚಿತ್ರರಂಗದ ಆಂತರಿಕ ಸಮಸ್ಯೆಗಳು ಇಂದಿಗೂ ಹಲವಿವೆ. ಸುಮಲತಾ ಅವರ ಆದ್ಯತೆಗಳು ಏನು ಎಂಬುದು ಗೊತ್ತಿಲ್ಲ. ಆದರೆ ಅವರಿಂದ ಒಳ್ಳೆಯ ಕೆಲಸಗಳು ಆಗಬೇಕು ಎಂದು ಬಯಸುವೆ.

* ಆಡಳಿತ ಪಕ್ಷವನ್ನು, ಪುರುಷ ಪ್ರಧಾನ ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಗೆದ್ದ ಪರಿಯ ಬಗ್ಗೆ ನಿಮ್ಮ ಅನಿಸಿಕೆ?

ಇಂದು ಚುನಾವಣೆ ಎದುರಿಸುವುದೇ ದೊಡ್ಡ ಸವಾಲು. ಅದರಲ್ಲೂ, ಈ ರೀತಿ ಆಳುವ ಪಕ್ಷವನ್ನು ಎದುರು ಹಾಕಿಕೊಂಡು ಗೆದ್ದದ್ದು ಬಹಳ ದೊಡ್ಡದು. ಅಂದಹಾಗೆ, ಅಧಿಕಾರ ಸಿಕ್ಕಿದೆ ಎಂದು ಈಗಿನ ಕಾಲದಲ್ಲಿ ಬೀಗುವಂತಿಲ್ಲ. ಜನರ ಆಕಾಂಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವುದು ಮುಖ್ಯ. ಸುಮಲತಾ ಅವರಿಗೆ ನೋವಾಗುವಂತೆ ಕೆಲವು ರಾಜಕಾರಣಿಗಳು ಆಡಿದ ವೈಯಕ್ತಿಕ ಮಟ್ಟದ ಮಾತುಗಳೇ ಸುಮಲತಾ ಪರ ಮತ ಚಲಾಯಿಸಲು ಹೆಣ್ಣುಮಕ್ಕಳನ್ನು ಪ್ರಚೋದಿಸಿರಬಹುದು.

* ಕರ್ನಾಟಕಕ್ಕೆ ಸುಮಲತಾ ಅವರಿಂದ ಯಾವೆಲ್ಲ ಕೆಲಸಗಳು ಆಗಬಹುದು?

ರೈತರು ಅತಿಹೆಚ್ಚು ಆತ್ಮಹತ್ಯೆ ಮಾಡಿಕೊಂಡಿರುವ ರಾಜ್ಯಗಳಲ್ಲಿ ನಮ್ಮದೂ ಸೇರಿದೆ. ಮಂಡ್ಯದಲ್ಲಿ ಹೆಚ್ಚು ಜನ ಆಶ್ರಯಿಸಿರುವುದು ಕೃಷಿಯನ್ನು. ಹಾಗಾಗಿ ಅವರು ಕೃಷಿಕರಿಗೆ ಮೊದಲ ಆದ್ಯತೆ ನೀಡಬಹುದು ಎಂದು ಭಾವಿಸುವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !