ದೋನಿ ಪತ್ನಿಗೆ ಪ್ರಾಣ ಭಯ: ಪಿಸ್ತೂಲ್‌ ಬಳಕೆ ಪರವಾನಗಿ ಕೋರಿ ಅರ್ಜಿ

7

ದೋನಿ ಪತ್ನಿಗೆ ಪ್ರಾಣ ಭಯ: ಪಿಸ್ತೂಲ್‌ ಬಳಕೆ ಪರವಾನಗಿ ಕೋರಿ ಅರ್ಜಿ

Published:
Updated:
ಪತ್ನಿ ಸಾಕ್ಷಿ ಜೊತೆ ದೋನಿ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ದೋನಿ ಪತ್ನಿ ಸಾಕ್ಷಿ ಅವರು ಜೀವ ಭಯದ ಕಾರಣ ಪಿಸ್ತೂಲ್‌ ಬಳಕೆ ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಿಸ್ತೂಲ್‌ ಅಥವಾ .32 (ಪಾಯಿಂಟ್‌ 32) ರಿವಾಲ್ವರ್‌ ಬಳಕೆಗೆ ಅನುಮತಿ ನೀಡಬೇಕು ಎಂದು  ಅರ್ಜಿಯಲ್ಲಿ ಕೋರಿದ್ದಾರೆ.

ದಿನದ ಬಹುಸಮಯ ಮನೆಯಲ್ಲಿ ಒಬ್ಬರೇ ಇರುವುದರಿಂದ ಹಾಗೂ ವೈಯಕ್ತಿಕ ಕೆಲಸಗಳಿಗಾಗಿ ಮನೆಯಿಂದ ಹೊರಗೆ ಹೋಗುವಾಗಲೂ ಒಬ್ಬಂಟಿಯಾಗಿಯೇ ಇರುವುದರಿಂದ ಪ್ರಾಣ ಭಯವಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸಾಕ್ಷಿ, ಆದಷ್ಟು ಬೇಗ ಪರವಾನಗಿ ನೀಡಬೇಕೆಂದು ಮನವಿ ಮಾಡಿದ್ದಾರೆ.

ದೋನಿ 2008ರಲ್ಲಿ ಪಿಸ್ತೂಲ್‌ ಬಳಕೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದರು. ಆ ವೇಳೆ ದೋನಿ ಮನವಿಯನ್ನು ತಿರಸ್ಕರಿಸಲಾಗಿತ್ತಾದರೂ, ಬಳಿಕ 2010ರಲ್ಲಿ 9ಎಂಎಂ ಪಿಸ್ತೂಲ್‌ ಬಳಕೆ ಪರವಾನಗಿ ಪಡೆದಿದ್ದರು.

ದೋನಿ ಅವರು ಶಸ್ತ್ರಾಸ್ತ ಬಳಸಲು ಅನುಮತಿ ನೀಡಬೇಕು ಎಂದು ಜಾರ್ಖಂಡ್‌ ಸರ್ಕಾರ  ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸ್ಸು ಮಾಡಿತ್ತು. ಆದಾಗ್ಯೂ ಗೃಹ ಸಚಿವಾಲಯ ಹಲವು ಹಂತದ ಸ್ಪಷ್ಟೀಕರಣ ಕೇಳಿದ ಕಾರಣ ಪರವಾನಗಿ ದೊರೆಯುವುದು ವಿಳಂಬವಾಗಿತ್ತು.

ಬರಹ ಇಷ್ಟವಾಯಿತೆ?

 • 14

  Happy
 • 3

  Amused
 • 2

  Sad
 • 2

  Frustrated
 • 5

  Angry

Comments:

0 comments

Write the first review for this !