ತುಂಗಳ ಕಾಲೇಜು ಬಿಟ್ಟವರ ಶುಲ್ಕ ವಾಪಸ್‌..!

7
13 ವಿದ್ಯಾರ್ಥಿಗಳ ಪೋಷಕರಿಗೆ ಒಟ್ಟು ₹ 6 ಲಕ್ಷ ಮೊತ್ತ ಮರಳಿಸಿದ ಕಾಲೇಜಿನ ಆಡಳಿತ ಮಂಡಳಿ

ತುಂಗಳ ಕಾಲೇಜು ಬಿಟ್ಟವರ ಶುಲ್ಕ ವಾಪಸ್‌..!

Published:
Updated:
Deccan Herald

ವಿಜಯಪುರ: ನಗರದ ಹೊರವಲಯ ಇಟ್ಟಂಗಿಹಾಳದಲ್ಲಿನ ತುಂಗಳ ಇಂಡಿಪೆಂಡೆಂಟ್ ಪಿ.ಯು. ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ದಾಖಲಾಗಿ, ಕೆಲ ದಿನಗಳಲ್ಲೇ ಕಾಲೇಜು ತೊರೆದಿದ್ದ ವಿದ್ಯಾರ್ಥಿಗಳ ಪೋಷಕರಿಗೆ ಸೋಮವಾರ ನಗರದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ, ಕಾಲೇಜಿನ ಆಡಳಿತ ಮಂಡಳಿ ಶುಲ್ಕ ವಾಪಸ್‌ ಮಾಡಿತು.

ಬಬಲೇಶ್ವರ ತಾಲ್ಲೂಕಿನ ಯಕ್ಕುಂಡಿ ಗ್ರಾಮದ ಪ್ರಗತಿಪರ ರೈತ ರವಿ ತೊರವಿ, ತಮ್ಮ ಮಗ ಅಭಿಷೇಕ್‌ ತೊರವಿಯನ್ನು ತುಂಗಳ ಕಾಲೇಜಿಗೆ ಶೈಕ್ಷಣಿಕ ವರ್ಷದ ಆರಂಭದಲ್ಲೇ ದಾಖಲಿಸಿದ್ದರು. ಕಾಲೇಜಿನ ಪರಿಸರಕ್ಕೆ ಅಭಿಷೇಕ್‌ ಹೊಂದಿಕೊಳ್ಳದಿದ್ದರಿಂದ, ಅಲ್ಲಿಂದ ಬೇರೆ ಕಾಲೇಜಿಗೆ ದಾಖಲಿಸಿದ್ದರು.

ಪ್ರವೇಶಾತಿ ಸಂದರ್ಭ ಕಾಲೇಜಿಗೆ ಕಟ್ಟಿದ್ದ ಶುಲ್ಕ ವಾಪಸ್‌ ಮಾಡುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದರು. ಸಕಾಲಕ್ಕೆ ಸ್ಪಂದನೆ ಸಿಗದಿದ್ದರಿಂದ ಬೇಸತ್ತು, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ, ಜಿಲ್ಲಾಧಿಕಾರಿ, ಬೆಳಗಾವಿ ವಿಭಾಗದ ಐಟಿ ಕಚೇರಿಗೆ ಹೆಚ್ಚುವರಿ ಶುಲ್ಕ ವಸೂಲಿಗೆ ಸಂಬಂಧಿಸಿದಂತೆ ದೂರು ನೀಡಿದ್ದರೆ; ವಿಜಯಪುರ ಗ್ರಾಮೀಣ ಪೊಲೀಸ್‌ ಠಾಣೆಗೆ ಕಾಲೇಜಿನ ಆಡಳಿತ ಮಂಡಳಿ ಮಾನಸಿಕ ಕಿರುಕುಳ ನೀಡಿದೆ ಎಂಬ ಕುರಿತು ದೂರು ದಾಖಲಿಸಿದ್ದರು.

ಈ ಕುರಿತು ‘ಪ್ರಜಾವಾಣಿ’ ಇದೇ 3ರ ಶುಕ್ರವಾರದ ಸಂಚಿಕೆಯಲ್ಲಿ ‘ಹೆಚ್ಚುವರಿ ಶುಲ್ಕದ ವಿರುದ್ಧ ‘ಏಕಾಂಗಿ’ ಹೋರಾಟ !’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.

ಇದಕ್ಕೆ ಸಂಬಂಧಿಸಿದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಡಿಡಿಪಿಯು ಪ್ರೊ.ಎ.ಬಿ.ಅಂಕದ ಸಮ್ಮುಖ ಸೋಮವಾರ ತುಂಗಳ ಕಾಲೇಜಿನ ಆಡಳಿತ ಮಂಡಳಿ, ಕಾಲೇಜು ತೊರೆದ 13 ವಿದ್ಯಾರ್ಥಿಗಳ ಪೋಷಕರಿಗೆ ₹ 6 ಲಕ್ಷ ಮೊತ್ತವನ್ನು ಪ್ರತ್ಯೇಕ ಚೆಕ್‌ಗಳ ಮೂಲಕ ವಿತರಿಸಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !