ವಿದ್ಯಾರ್ಥಿ ಹತ್ಯೆ, ಸುಳಿವು ಲಭ್ಯ: ಪೊಲೀಸ್‌

7
ಕನ್ಸಾಸ್‌ನಲ್ಲಿ ನಡೆದಿದ್ದ ಪ್ರಕರಣ

ವಿದ್ಯಾರ್ಥಿ ಹತ್ಯೆ, ಸುಳಿವು ಲಭ್ಯ: ಪೊಲೀಸ್‌

Published:
Updated:
ಶರತ್‌

ವಾಷಿಂಗ್ಟನ್‌ : ಕನ್ಸಾಸ್‌ ನಗರದಲ್ಲಿ ಶುಕ್ರವಾರ ನಡೆದ ಭಾರತೀಯ ವಿದ್ಯಾರ್ಥಿ ಶರತ್‌ ಕೊಪ್ಪು ಹತ್ಯೆಗೆ ಸಂಬಂಧಿಸಿದಂತೆ ಕೆಲವು ಸುಳಿವು ಲಭ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಶೂಟೌಟ್‌ ಪ್ರಕರಣ ಸಂಬಂಧ ಇದುವರೆಗೆ ಮೂರು ಸುಳಿವು ಸಿಕ್ಕಿದೆ’  ಪೊಲೀಸ್‌ ವಕ್ತಾರ ಕ್ಯಾಪ್ಟನ್‌ ಲಿಯೊನಲ್‌ ಕರ್ನಲ್‌ ತಿಳಿಸಿದ್ದಾರೆ ಎಂದು ಕನ್ಸಾಸ್ ಸ್ಟಾರ್‌ ವರದಿ ಮಾಡಿದೆ.  ‘ಆರೋಪಿಯನ್ನು ಗುರುತಿಸುವ ಸಮುದಾಯದ ನೆರವು ಕೋರಲಾಗಿದೆ’ ಎಂದು ತಿಳಿಸಿದರು.

ಶೂಟೌಟ್‌ ನಡೆಯುವ ಮುನ್ನವೇ ಆರೋಪಿ ರೆಸ್ಟೋರೆಂಟ್‌ ಒಳಗೆ ಇದ್ದ ಎಂಬ ಸಿಸಿಟಿವಿ ದೃಶ್ಯಾವಳಿ ಬಗ್ಗೆ ಪೊಲೀಸರು ಇನ್ನಷ್ಟೇ ಖಚಿತಪಡಿಸಬೇಕಿದೆ. ಎಂಜಿನಿಯರಿಂಗ್‌ ಪದವಿ ಪಡೆದ ಬಳಿಕ ಹೈದರಾಬಾದ್‌ನ ಸಾಫ್ಟ್‌ವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶರತ್‌, ಸ್ನಾತಕೋತ್ತರ ಪದವಿಗಾಗಿ ಜನವರಿಯಲ್ಲಿ ಅಮೆರಿಕಕ್ಕೆ ಬಂದು ಮಿಸ್ಸೌರಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದರು. ಅಧ್ಯಯನದ ಜೊತೆಗೆ ಜೇಸ್‌ ಫಿಶ್‌ ಆಂಡ್‌ ಚಿಕನ್‌ ಮಾರುಕಟ್ಟೆಯಲ್ಲಿ ಅವರು ಅರೆಕಾಲಿಕ ಕೆಲಸ ಮಾಡುತ್ತಿದ್ದರು. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !