ಲಿಂಗಾಯತ ಸ್ವತಂತ್ರ ಧರ್ಮ: ಲೋಕಸಭಾ ಚುನಾವಣೆ ಬಳಿಕ ಹೋರಾಟ– ಎಂ.ಬಿ.ಪಾಟೀಲ

7

ಲಿಂಗಾಯತ ಸ್ವತಂತ್ರ ಧರ್ಮ: ಲೋಕಸಭಾ ಚುನಾವಣೆ ಬಳಿಕ ಹೋರಾಟ– ಎಂ.ಬಿ.ಪಾಟೀಲ

Published:
Updated:

ವಿಜಯಪುರ: ‘ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಲೋಕಸಭಾ ಚುನಾವಣೆ ಬಳಿಕ ಹೋರಾಟ ನಡೆಸಲಾಗುವುದು’ ಎಂದು ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ತಿಳಿಸಿದರು.

‘ಇದೀಗ ಹೋರಾಟಕ್ಕಿಳಿದರೆ ಚುನಾವಣೆಗಾಗಿ ಸಲ್ಲದ ಅಪಪ್ರಚಾರ ನಡೆಯಲಿದೆ. ಲೋಕಸಭಾ ಚುನಾವಣೆ ಬಳಿಕ ಮೈದಾನ ಖುಲ್ಲಾ ಇರಲಿದೆ. ಆಗ ಹೋರಾಟಕ್ಕೆ ತೀವ್ರ ಸ್ವರೂಪ ನೀಡಲಾಗುವುದು’ ಎಂದು ಶನಿವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

‘ಗದಗ, ಚಾಮರಾಜನಗರದಲ್ಲಿ ಸಿದ್ದರಾಮಯ್ಯ ನೀಡಿದ ಹೇಳಿಕೆಗಳನ್ನು ಕೆಲವರ ಕಪಿಮುಷ್ಠಿಯಲ್ಲಿರುವ ಮಾಧ್ಯಮಗಳು ತಿರುಚಿವೆ. ಹೋರಾಟದಿಂದ ಹಿನ್ನಡೆಯಾಯ್ತು ಎಂದು ಎಲ್ಲಿಯೂ ಅವರು ಹೇಳಿಲ್ಲ’ ಎಂದು ಎಂ.ಬಿ.ಪಾಟೀಲ ಇದೇ ಸಂದರ್ಭ ಸ್ಪಷ್ಟಪಡಿಸಿದರು.

‘ಇದೇ 22ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಸಿದ್ದರಾಮಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸರಿಪಡಿಸುವರು ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !