ಶುಕ್ರವಾರ, ನವೆಂಬರ್ 22, 2019
25 °C

ದಸರಾ ಚಲನಚಿತ್ರ ಕಾರ್ಯಾಗಾರ: ನೋಂದಣಿ ಆರಂಭ

Published:
Updated:

ಮೈಸೂರು: ಮೈಸೂರು ದಸರಾ ಚಲನಚಿತ್ರೋತ್ಸವ ಉಪ ಸಮಿತಿ ವತಿಯಿಂದ ಚಲನಚಿತ್ರ ತಯಾರಿಕೆಯಲ್ಲಿ ಕತೆ ಮತ್ತು ಚಿತ್ರಕತೆ ಬಗ್ಗೆ 3 ದಿನದ ಕಾರ್ಯಾಗಾರ ಆಯೋಜಿಸಲಾಗಿದ್ದು, ಕಾರ್ಯಾಗಾರಕ್ಕೆ ಸೆ.15ರಿಂದ ನೋಂದಣಿ ಆರಂಭಿಸಲಾಗಿದೆ ಎಂದು ಚಲನಚಿತ್ರ ಉಪ ಸಮಿತಿ ಕಾರ್ಯದರ್ಶಿ ತಿಳಿಸಿದ್ದಾರೆ.

ಸೆ.20ರಿಂದ 22ರವರೆಗೆ 3 ದಿನ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಈ ಕಾರ್ಯಾಗಾರ ನಡೆಯಲಿದೆ.

ಚಲನಚಿತ್ರ ನಿರ್ದೇಶಕರಾದ ಪಿ.ಶೇಷಾದ್ರಿ, ಲಿಂಗದೇವರು, ಜೋಗಿ, ಬಿ.ಸುರೇಶ್ ಹಾಗೂ ಹೆಸರಾಂತ ಚಲನಚಿತ್ರ ತರಬೇತಿ ಸಂಸ್ಥೆಗಳ ಪರಿಣಿತ ಸಂಪನ್ಮೂಲ ವ್ಯಕ್ತಿಗಳು ಕತೆ ಮತ್ತು ಚಿತ್ರಕತೆ ತಯಾರಿಕೆಯ ವಿವಿಧ ಮಜಲುಗಳ ಕುರಿತಂತೆ ಶಿಬಿರಾರ್ಥಿಗಳೊಂದಿಗೆ ಪರಿಣಿತಿ ಹಂಚಿಕೊಳ್ಳಲಿದ್ದಾರೆ. ಕೆಲವು ಚಲನಚಿತ್ರಗಳ ಪ್ರಾತ್ಯಕ್ಷಿಕೆಯೂ ಇರಲಿದೆ. ಎಂದಿದ್ದಾರೆ.

ಆಸಕ್ತರು ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಸೆ.19ರ ಸಂಜೆ 5.30ರೊಳಗಾಗಿ ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ವಾರ್ತಾ ಭವನ ಕಛೇರಿ ವೇಳೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಮಾಹಿತಿಗಾಗಿ ಮನು, 9448092049 ಸಂಪರ್ಕಿಸಿ.

ಪ್ರತಿಕ್ರಿಯಿಸಿ (+)