115 ಬೈಕ್‌ ಸವಾರರಿಗೆ ದಂಡ

7

115 ಬೈಕ್‌ ಸವಾರರಿಗೆ ದಂಡ

Published:
Updated:

ಬೆಂಗಳೂರು: ಸಂಚಾರ ನಿಮಯಗಳನ್ನು ಉಲ್ಲಂಘಿಸಿ ದಂಡ ಕಟ್ಟದೆ ತಪ್ಪಿಸಿಕೊಂಡು ಓಡಾಡುತ್ತಿದ್ದ 115 ಬೈಕ್‌ ಸವಾರರಿಗೆ ವಿ.ವಿ. ಪುರ ಸಂಚಾರಿ ಪೊಲೀಸರು ತಪಾಸಣೆ ನಡೆಸಿ ದಂಡ ಹಾಕಿದ್ದಾರೆ.

‘ದಂಡ ಕಟ್ಟದೆ ಬಾಕಿ ಉಳಿದಿದ್ದ ಬೈಕ್‌ಗಳ ನೋಂದಣಿ ಸಂಖ್ಯೆಗಳನ್ನು ಪಟ್ಟಿ ಸಿದ್ಧಪಡಿಸಿಕೊಂಡು ಮೂರು ದಿನಗಳಿಂದ ಸಿಗ್ನಲ್‌ಗಳಲ್ಲಿ ತಪಾಸಣೆ ನಡೆಸಲಾಯಿತು. ಒಟ್ಟು ₹ 13 ಸಾವಿರ ದಂಡ ಸಂಗ್ರಹವಾಗಿದೆ’ ಎಂದು ಪೊಲೀಸರು ಹೇಳಿದರು.

‘ಸಿಗ್ನಲ್‌ ಜಂಪ್, ಹೆಲ್ಮೆಟ್‌ ಧರಿಸದಿರುವುದು, ಫುಟ್‌ಪಾತ್‌ನಲ್ಲಿ ವಾಹನ ಚಾಲನೆ, ಟ್ರಿಪಲ್ ರೈಡಿಂಗ್, ಪರವಾನಗಿ ಇಲ್ಲದಿರುವುದು ಸೇರಿದಂತೆ ಇತರ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರು. ಅವರ ವಿರುದ್ಧ ಪ್ರಕರಣಗಳೂ ದಾಖಲಾಗಿದ್ದವು. ದಂಡ ಪಾವತಿಸುವಂತೆ ನೋಟಿಸ್‌ ಕೂಡ ನೀಡಲಾಗಿತ್ತು’ ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !