ಶಾಲಾ ಟ್ರಸ್ಟ್‌ ಸದಸ್ಯರ ವಿರುದ್ಧ ಎಫ್‌ಐಆರ್

7
ಕಾಂಪ್ಲಾನ್ ಪೊಟ್ಟಣ ದುರುಪಯೋಗ ಆರೋಪ

ಶಾಲಾ ಟ್ರಸ್ಟ್‌ ಸದಸ್ಯರ ವಿರುದ್ಧ ಎಫ್‌ಐಆರ್

Published:
Updated:

ಬೆಂಗಳೂರು: ‘ಶಿವಾಜಿನಗರದ ಕರ್ನಲ್ ಹಿಲ್ ಆಂಗ್ಲ ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲು ದಾನಿಗಳು ನೀಡಿದ್ದ ₹87 ಸಾವಿರ ಮೊತ್ತದ ಕಾಂಪ್ಲಾನ್ ಪೊಟ್ಟಣಗಳನ್ನು ಟ್ರಸ್ಟ್‌ ಸದಸ್ಯರೇ ಮಾರಿಕೊಂಡಿದ್ದಾರೆ’ ಎಂದು ಆರೋಪಿಸಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪರಮ್‌ಜಿತ್ ಸಿಂಗ್‌ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪರಮ್‌ಜಿತ್‌ ನೀಡಿರುವ ದೂರು ಆಧರಿಸಿ ಶಾಲೆಯ ಅಧ್ಯಕ್ಷ ಲಾರೆನ್ ರಾಮಜಿ, ಪದಾಧಿಕಾರಿಗಳಾದ ಹರ್ಷವರ್ಧನ್, ಉನ್ಸನ್ ಕಾರ್ನಲೆ, ಮಾರ್ಡಿನ್ ಜಾನ್, ಆಲನ್ ಜಾನ್ಸ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ ಎಂದು ಗೊತ್ತಾಗಿದೆ.

‘ಶಿವಾಜಿನಗರ ಪೊಲೀಸ್ ಠಾಣೆ ಹಿಂಭಾಗದಲ್ಲೇ ಶಾಲೆ ಇದೆ. 200‌ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ವಿತರಿಸಲೆಂದು ಸ್ವಯಂಸೇವಾ ಸಂಘಟನೆ ಸದಸ್ಯರು ಹಾಗೂ ಸಾರ್ವ
ಜನಿಕರು, ಕಳೆದ ನವೆಂಬರ್‌ನಲ್ಲಿ ಕಾಂಪ್ಲಾನ್ ಕೊಡಿಸಿದ್ದರು’ ಎಂದು ಪರಮ್‌ಜಿತ್ ದೂರಿನಲ್ಲಿ ಹೇಳಿದ್ದಾರೆ.

 ‘ಪೊಟ್ಟಣಗಳನ್ನು ವಿದ್ಯಾರ್ಥಿಗಳಿಗೂ ನೀಡಿಲ್ಲ. ಶಾಲೆಯಲ್ಲೂ ಆ ಪೊಟ್ಟಣಗಳಿಲ್ಲ. ಶಾಲಾ ಟ್ರಸ್ಟಿಗಳೇ ಅವುಗಳನ್ನು ಬಳಸಿಕೊಂಡು ನಂಬಿಕೆ ದ್ರೋಹ ಎಸಗಿದ್ದಾರೆ’ ಎಂದು ದೂರಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !