ಹೊತ್ತಿ ಉರಿದ ಬಸ್‌; ತಪ್ಪಿದ ಅಪಾಯ

7

ಹೊತ್ತಿ ಉರಿದ ಬಸ್‌; ತಪ್ಪಿದ ಅಪಾಯ

Published:
Updated:
Deccan Herald

ಬೆಂಗಳೂರು: ತಿರುಪತಿಯಿಂದ ಬೆಂಗಳೂರಿಗೆ ಬರುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ ನಿಗಮದ (ಕೆಎಸ್‌ಆರ್‌ಟಿಸಿ) ಅಂಬಾರಿ ಬಸ್‌ ಕೆ.ಆರ್‌.ಪುರ ಬಳಿ ಬರುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಬುಧವಾರ ಬೆಳಿಗ್ಗೆ 5ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿಯೇ ಸುಟ್ಟು ಕರಕಲಾಯಿತು. ಬಸ್‌ನ ಹಿಂಬದಿಯಲ್ಲಿ ಹೊಗೆ ಬರುತ್ತಿರುವುದನ್ನು ಕನ್ನಡಿಯಲ್ಲಿ ನೋಡಿ ಎಚ್ಚೆತ್ತುಕೊಂಡ ಚಾಲಕ, ಕೂಡಲೇ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದರಿಂದ ಯಾವುದೇ ಸಾವು–ನೋವು ಸಂಭವಿಸಿಲ್ಲ.

ತಕ್ಷಣ ಸ್ಥಳಕ್ಕೆ ಬಂದ ಮಹದೇವಪುರದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಬೆಂಗಳೂರು ಕೇಂದ್ರ ವಿಭಾಗದ ಶಾಂತಿನಗರ ಡಿಪೊಗೆ ಸೇರಿದ ಬಸ್‌ ಇದಾಗಿದೆ. 

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 3

  Sad
 • 0

  Frustrated
 • 3

  Angry

Comments:

0 comments

Write the first review for this !