ಅಕ್ರಮ ಕಟ್ಟಡ ನಿರ್ಮಾಣ: ಇಮ್ರಾನ್‌ ವಿರುದ್ಧ ಕ್ರಮಕ್ಕೆ ಆದೇಶ

7

ಅಕ್ರಮ ಕಟ್ಟಡ ನಿರ್ಮಾಣ: ಇಮ್ರಾನ್‌ ವಿರುದ್ಧ ಕ್ರಮಕ್ಕೆ ಆದೇಶ

Published:
Updated:
Deccan Herald

ಇಸ್ಲಾಮಾಬಾದ್‌: ಇಲ್ಲಿನ ಬನಿ ಗಲಾ ಪ್ರದೇಶದಲ್ಲಿರುವ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಮನೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದ್ದು, ಈ ಸಂಬಂಧ ಅವರ ವಿರುದ್ಧವೇ ಮೊದಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಆಸ್ತಿಯನ್ನು ಸಕ್ರಮಗೊಳಿಸಲು ದಂಡ ಕಟ್ಟುವಂತೆ ಇಮ್ರಾನ್‌ ಅವರಿಗೆ ಸೂಚಿಸಿದ ಮರುದಿನ ಮುಖ್ಯ ನ್ಯಾಯಮೂರ್ತಿ ಸಾಕಿಬ್‌ ನಿಸಾರ್‌ ಅವರು ಈ ಆದೇಶ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬನಿ ಗಲಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಒತ್ತುವರಿ ನಡೆದಿದೆ ಮತ್ತು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಇಮ್ರಾನ್‌ ಖಾನ್‌ ಅವರು ನ್ಯಾಯಾಲಯದ ಗಮನ ಸೆಳೆದಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು ಇಮ್ರಾನ್‌ ಅವರೇ ಮೊದಲು ಕಾನೂನು ಪಾಲಿಸಿದರೆ ಉಳಿದವರು ಅವರನ್ನು ಅನುಕರಿಸುತ್ತಾರೆ ಎಂದಿದೆ.

ಈ ಪ್ರಕರಣ ಇತ್ಯರ್ಥಗೊಳಿಸಲು ರಾಜಧಾನಿ ಅಭಿವೃದ್ಧಿ ಪ್ರಾಧಿಕಾರದ(ಸಿಡಿಎ) ಜತೆ ಸಹಕರಿಸುವುದಾಗಿ ಪ್ರಧಾನಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !