ರಸ್ತೆ ಬದಿ ಮೀನಿನ ತ್ಯಾಜ್ಯ; ದುರ್ವಾಸನೆ..!

ಸೋಮವಾರ, ಏಪ್ರಿಲ್ 22, 2019
32 °C

ರಸ್ತೆ ಬದಿ ಮೀನಿನ ತ್ಯಾಜ್ಯ; ದುರ್ವಾಸನೆ..!

Published:
Updated:
Prajavani

ಕೊಲ್ಹಾರ: ಇಲ್ಲಿನ ಕೊರ್ತಿ-ಕೊಲ್ಹಾರ ಸೇತುವೆ ಬಳಿಯ ರಸ್ತೆ ಬದಿಯಲ್ಲಿ, ಸ್ಥಳೀಯ ಕೆಲ ಹೋಟೆಲ್‌ನವರು ಮೀನಿನ ತ್ಯಾಜ್ಯ ಹಾಕುತ್ತಿರುವುದರಿಂದ, ಇಡೀ ಪರಿಸರ ದುರ್ವಾಸನೆಯಿಂದ ಕೂಡಿದೆ.

ಸೇತುವೆ ಮೇಲೆ ಸೇರಿದಂತೆ ಈ ಭಾಗದ ಸುತ್ತಮುತ್ತ ಸಂಚರಿಸುವ ವಾಹನ ಸವಾರರು ಇದರ ಪರಿಣಾಮ ಮೂಗು ಮುಚ್ಚಿಕೊಂಡೇ ಪ್ರಯಾಣ ಮಾಡುವ ದುಃಸ್ಥಿತಿ ಎದುರಾಗಿದೆ.

ಕೆನೆ ಮೊಸರಿಗೆ ಹೆಸರು ವಾಸಿಯಾಗಿರುವ ಕೊಲ್ಹಾರ; ಮೀನಿನ ಊಟಕ್ಕೂ ಅಷ್ಟೇ ಖ್ಯಾತಿ. ಇಲ್ಲಿನ ಯುಕೆಪಿ ಕ್ರಾಸ್‌ನ ಹೆದ್ದಾರಿಯ ಅಕ್ಕಪಕ್ಕದಲ್ಲಿನ ಸಾಕಷ್ಟು ಸಂಖ್ಯೆಯ ಹೋಟೆಲ್‌ಗಳಲ್ಲಿ ಮೀನಿನ ಊಟ ಸವಿಯಲಿಕ್ಕಾಗಿಯೇ ವಿವಿಧೆಡೆಯ ಜನ ಇಲ್ಲಿಗೆ ಬರೋದು ವಿಶೇಷ.

ಬಹುತೇಕ ಹೋಟೆಲ್‌ನವರು ಮೀನಿನ ತ್ಯಾಜ್ಯವನ್ನು ಸಮೀಪದ ಸೇತುವೆ ಬಳಿಯ ರಸ್ತೆ ಇಕ್ಕೆಲಗಳಲ್ಲಿ ಎಸೆಯುತ್ತಿರುವುದರಿಂದ ಕೃಷ್ಣಾ ನದಿಯ ನೀರು ಕಲುಷಿತವಾಗುವ ಸಂಭವವಿದೆ. ತ್ಯಾಜ್ಯವನ್ನು ರಸ್ತೆ ಪಕ್ಕದಲ್ಲಿ ಎಸೆಯುವುತ್ತಿರುವುದಕ್ಕೆ ಪ್ರಯಾಣಿಕರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರೂ, ತಪ್ಪದಾಗಿದೆ.

ಮೀನಿನ ತ್ಯಾಜ್ಯದ ಸಮಸ್ಯೆ ಪರಿಹರಿಸಬೇಕು ಎಂದು ವಿವಿಧ ಸಂಘಟನೆಯವರು ಪಟ್ಟಣ ಪಂಚಾಯ್ತಿಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ. ಈ ವಿಷಯ ಕುರಿತು ಸಭೆಗಳಲ್ಲಿ ಚರ್ಚೆಯಾಗಿದೆ ವಿನಾಃ ಯಾವುದೇ ಪರಿಹಾರದ ನಿರ್ಣಯವಾಗಿಲ್ಲ ಎಂಬ ಅಸಮಾಧಾನ ಸ್ಥಳೀಯರದ್ದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !